11:23 PM Wednesday 27 - August 2025

ಚಾಲಕ ಇಲ್ಲದೇ ಏಕಾಏಕಿ ಚಲಿಸಿದ ರೈಲು: ತಪ್ಪಿದ ದೊಡ್ಡ ದುರಂತ

25/02/2024

ಚಾಲಕ ಇಲ್ಲದೇ ಸರಕು ಸಾಗಣೆ ರೈಲೊಂದು ಏಕಾಏಕಿ ಚಲಿಸಲು ಪ್ರಾರಂಭಿಸಿ 84 ಕಿ.ಮೀ ಕ್ರಮಿಸಿರುವ ಘಟನೆ ಜಮ್ಮು-ಕಾಶ್ಮೀರದಲ್ಲಿ ನಡೆದಿದೆ.

ಭಾನುವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಕಾಂಕ್ರೀಟ್‌ ಹೊತ್ತ ರೈಲು ಪಠಾಣ್‌ಕೋಟ್‌ ಕಡೆಗೆ ತೆರಳಬೇಕಿತ್ತು. ಇಳಿಜಾರಿನ ಕಾರಣ ಚಾಲಕನಿಲ್ಲದೇ ಏಕಾಏಕಿ ಚಲಿಸಿದೆ. ಸಿಬ್ಬಂದಿ ಬದಲಾವಣೆಗಾಗಿ ಕಥುವಾ ನಿಲ್ದಾಣದಲ್ಲಿ ಚಾಲಕ ರೈಲನ್ನು ನಿಲ್ಲಿಸಿದ್ದ. ಇದೇ ವೇಳೆ ರೈಲಿನ ಎಂಜಿನ್ ಆನ್ ಆಗಿದ್ದು, ರೈಲಿನಿಂದ ಇಳಿಯುವುದಕ್ಕೂ ಮೊದಲು ಚಾಲಕ ಹ್ಯಾಂಡ್ ಬ್ರೇಕ್ ಹಾಕಲು ಮರೆತಿದ್ದಾನೆ. ಹೀಗಾಗಿ ರೈಲು ಏಕಾಏಕಿ ಚಲಿಸಲು ಪ್ರಾರಂಭಿಸಿದೆ.

ವರದಿಗಳ ಪ್ರಕಾರ ರೈಲನ್ನು ನಿಲ್ಲಿಸಲು ಅಧಿಕಾರಿಗಳು ಹಲವು ಪ್ರಯತ್ನ ಮಾಡಿದರೂ ವಿಫಲರಾಗಿದ್ದಾರೆ. ಕೊನೆಗೆ ಪ್ರಯಾಣಿಕರ ರೈಲುಗಳ ಚಾಲಕರು ಮತ್ತು ಸಿಬ್ಬಂದಿಯ ಸಹಾಯದಿಂದ ದಸುಹಾ ಬಳಿಯ ಉಂಚಿ ಬಸ್ಸಿ ಪ್ರದೇಶದಲ್ಲಿ ರೈಲನ್ನು ನಿಲ್ಲಿಸಲಾಗಿದೆ.

ಅದೃಷ್ಟವಶಾತ್‌ ಯಾವುದೇ ಇತರ ರೈಲುಗಳು ವಿರುದ್ಧ ದಿಕ್ಕಿನಿಂದ ಅಥವಾ ಆ ಹಳಿಯಲ್ಲಿ ಇರಲಿಲ್ಲವಾದ್ದರಿಂದ ದೊಡ್ಡ ದುರಂತ ತಪ್ಪಿದೆ. ಘಟನೆಯಲ್ಲಿ ಯಾವುದೇ ಹಾನಿ ಅಥವಾ ಗಾಯಗಳ ಬಗ್ಗೆ ವರದಿಯಾಗಿಲ್ಲ. ಘಟನೆ ಕುರಿತು ರೈಲ್ವೇ ಇಲಾಖೆ ತನಿಖೆಗೆ ಆದೇಶಿಸಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version