8:10 AM Thursday 4 - September 2025

“ಸರ್ಕಾರಿ ಶಾಲೆ ಉಳಿಯಲಿ ಬೆಳೆಯಲಿ ನೆರೆಹೊರೆಯ ಸಮಾನ ಶಾಲೆಗಳಾಗಲಿ”:  ಮಾಹಿತಿ ಕಾರ್ಯಾಗಾರ

kundapura
11/01/2024

ಕುಂದಾಪುರ :   ಕುಂದಾಪುರ ಶೈಕ್ಷಣಿಕ ವಲಯದ ಹೆನ್ನ ಬೈಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್ ಡಿ ಎಂ ಸಿ ಹಳೆ ವಿದ್ಯಾರ್ಥಿಗಳು ಊರಿನ ಶಿಕ್ಷಣ ಆಸಕ್ತರ ಕೋರಿಕೆಯಂತೆ ಅಲ್ಲಿನ ಸರಕಾರಿ ಶಾಲೆಯಲ್ಲಿ ಮಕ್ಕಳ ದಾಖಲಾತಿ ಸಂಖ್ಯೆ ಬಹಳಷ್ಟು ಕಡಿಮೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಶಾಲೆಯ ದಾಖಲಾತಿ ಹೆಚ್ಚಳ ಮತ್ತು ಶಾಲೆಯನ್ನು ಉಳಿಸಿ ಬೆಳೆಸುವಲ್ಲಿ ಪೋಷಕರ ಮತ್ತು ಸಮುದಾಯದ ಪಾತ್ರದ ಬಗ್ಗೆ ಮಾಹಿತಿ ಕಾರ್ಯಾಗಾರವನ್ನು ನಡೆಸಲಾಯಿತು.

“ಸರ್ಕಾರಿ ಶಾಲೆ ಉಳಿಯಲಿ ಬೆಳೆಯಲಿ ನೆರೆಹೊರೆಯ ಸಮಾನ ಶಾಲೆಗಳಾಗಲಿ” ಎಂಬ ಧ್ಯೇಯ ಉದ್ದೇಶದೊಂದಿಗೆ ಕರ್ನಾಟಕ ರಾಜ್ಯ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಉಡುಪಿ ಜಿಲ್ಲೆ ಕುಂದಾಪುರ ಘಟಕ ಇದರ ವತಿಯಿಂದ ಹಮ್ಮಿಕೊಂಡಿರುವ ಮಾಹಿತಿ ಕಾರ್ಯಾಗಾರದ ಅಧ್ಯಕ್ಷತೆಯನ್ನು ಶಾಲಾ ಎಸ್ ಡಿ ಎಂಸಿ ಅಧ್ಯಕ್ಷ ಸಂಜೀವ ಶೆಟ್ಟಿ ವಹಿಸಿದ್ದರು.

ಶಾಲಾ ಮುಖ್ಯಶಿಕ್ಷಕ ಪದ್ಮನಾಭ ಶೇಟ್ ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.  ಸಮನ್ವಯ ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷ ಅಬ್ದುಲ್ ಸಲಾಂ ಚಿತ್ತೂರು, ಸಮನ್ವಯ ವೇದಿಕೆ ನಡೆದು ಬಂದ ದಾರಿ ವೇದಿಕೆಯ ನೀತಿ ನಿಯಮಗಳು ಸರ್ಕಾರಿ ಶಾಲೆಯ ಆಸ್ತಿಪಾಸ್ತಿಗಳ ರಕ್ಷಣೆ ಅದೆಷ್ಟೋ ಸರ್ಕಾರಿ ಶಾಲೆಗಳನ್ನು ಉಳಿಸುವ ಹೋರಾಟ ಮಾಡಿದ್ದು ಸಭೆಯಲ್ಲಿ ನೆನಪಿಸಿದರು.

ಕಾರ್ಯಾಗಾರದಲ್ಲಿ ಕುಂದಾಪುರ ತಾಲೂಕು ಘಟಕದ ಅಧ್ಯಕ್ಷ ಎಸ್.ವಿ. ನಾಗರಾಜ್ ಹೆನ್ನ ಬೈಲು ಶಾಲೆಯನ್ನು ಮುಂದಿನ ದಿನಗಳಲ್ಲಿ ಹೇಗೆ ಉಳಿಸಿಕೊಂಡು ಹೋಗುವ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದರು.

ಈ ಸಂದರ್ಭದಲ್ಲಿ  ಶಾಲೆಯನ್ನು ಉಳಿಸು ಬೆಳೆಸುವ ಗುರಿಯನ್ನು ಇಟ್ಟುಕೊಂಡು ಸತತವಾಗಿ ಸಮನ್ವಯ ವೇದಿಕೆ ಸಂಪರ್ಕದಲ್ಲಿ ಇದ್ದ ಶಿಕ್ಷಣ ಪ್ರೇಮಿ, ಚಿಂತಕರು ಹಾಗೂ ಸಾಹಿತಿಗಳು ಆಗಿರುವ ಮುಸ್ತಾಕ್ ಹೆನ್ ಬೈಲ್ ಇವರನ್ನು ಸಮನ್ವಯ ವೇದಿಕೆಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಸಮನ್ವಯ ವೇದಿಕೆ ಸಿದ್ದಾಪುರ ಗ್ರಾಮ ಪಂಚಾಯತ್ ಘಟಕದ ಅಧ್ಯಕ್ಷ ಮಹೇಶ್ ಭಟ್, ಸಾಹಿತಿಗಳು ಚಿಂತಕರು ಆದ ಮುಸ್ತಾಕ್ ಹೆನ್ನಬೈಲು. ಬ್ರಾಹ್ಮಿ ಟ್ರಸ್ಟ್ ನ ಅಧ್ಯಕ್ಷ ಆಸಿಫ್, ಸಮನ್ವಯ ವೇದಿಕೆಯ ಕುಂದಾಪುರ ತಾಲೂಕು ಕಾರ್ಯದರ್ಶಿ ಪ್ರಮೋದಾ ಕೆ. ಶೆಟ್ಟಿ, ಸಹ ಕಾರ್ಯದರ್ಶಿ, ರಮ್ಯಾ ದಯಾನಂದ್, ಸಂಘಟನಾ ಕಾರ್ಯದರ್ಶಿ ವರದಾ ಆಚಾರ್ಯ ಅಂಕದ ಕಟ್ಟೆ  ಉಪಸ್ಥಿತರಿದ್ದರು.  ಸಹ ಶಿಕ್ಷಕ ಕಾರ್ಯಕ್ರಮ ಮನೋಹರ್ ನಿರೂಪಿಸಿದರು.

ಇತ್ತೀಚಿನ ಸುದ್ದಿ

Exit mobile version