ಇವಿಎಂ ವಶಪಡಿಸಿ ನಕಲಿ ಓಟುಗಳನ್ನು ದಾಖಲಿಸಿ ಲೈವ್ ಕೊಟ್ಟ ಭೂಪ: ಬಿಜೆಪಿ ಸಂಸದರ ಪುತ್ರನಿಂದ ದಾಂಧಲೆ

ಗುಜರಾತ್ ನ ಬಿಜೆಪಿ ಸಂಸದ ಜಸ್ವಂತ್ ಸಿಂಗ್ ಬಾಬೊಟ್ ಅವರ ಮಗ ವಿಜಯ್ ಬಾಬೊಟ್ ಎಂಬವ ಮತದಾನ ಕೇಂದ್ರವನ್ನು ಕೈವಶ ಮಾಡಿಕೊಂಡು ಇವಿಎಂ ವಶಪಡಿಸಿ ನಕಲಿ ಓಟುಗಳನ್ನು ದಾಖಲಿಸಿದ್ದಲ್ಲದೇ ಇವೆಲ್ಲವನ್ನೂ ಸೋಶಿಯಲ್ ಮೀಡಿಯಾದಲ್ಲಿ ಲೈವ್ ಆಗಿ ಪ್ರಸಾರ ಮಾಡಿದ ಆಘಾತಕಾರಿ ಘಟನೆ ನಡೆದಿದೆ. ಗುಜರಾತನ ದಹೋದ್ ಲೋಕಸಭಾ ಕ್ಷೇತ್ರದ ಮತದಾನ ಕೇಂದ್ರದಲ್ಲಿ ಈ ದಾಂಧಲೆ ನಡೆದಿದೆ.
ತನ್ನ ಮಿತ್ರರೊಂದಿಗೆ ಮತದಾನ ಕೇಂದ್ರಕ್ಕೆ ನುಗ್ಗಿದ ಆತ ಇವಿಎಂ ಅನ್ನು ಕೈವಶ ಮಾಡಿಕೊಂಡು ಮತ ಚಲಾಯಿಸಿದ್ದು ಮತ್ತು ಅದರ ಆಧಾರವಾಗಿ ಕೆಂಪು ಲೈಟ್ ಉರಿದದ್ದು ಕೂಡ ಲೈವ್ ನಲ್ಲಿ ತೋರಿಸಲಾಗಿದೆ. ಮಧ್ಯಪ್ರವೇಶಿಸಿದ ಪೋಲಿಂಗ್ ಬೂತ್ ನ ಅಧಿಕಾರಿಗಳನ್ನು ತಡೆದಿರುವುದು ಕೂಡ ಲೈವ್ ವಿಡಿಯೋದಲ್ಲಿದೆ.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿರುವಂತೆಯೇ ಆತ ವಿಡಿಯೋವನ್ನು ಡಿಲೀಟ್ ಮಾಡಿದ್ದಾನೆ. ಆದರೆ ಅದಕ್ಕಿಂತ ಮೊದಲೇ ಸೋಶಿಯಲ್ ಮೀಡಿಯಾದಲ್ಲಿ ಅದು ಹರಿದಾಡಿದ್ದು ಇದನ್ನು ಆಲ್ಟ್ ನ್ಯೂಸ್ ನ ವ್ಯವಸ್ಥಾಪಕ ಮೊಹಮ್ಮದ್ ಝುಬೇರ್ ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ಅಲ್ಲಿನ ಕಾಂಗ್ರೆಸ್ ಅಭ್ಯರ್ಥಿ ದೂರು ನೀಡಿದ್ದಾರೆ. ಆದರೆ ಮುಖ್ಯ ವಾಹಿನಿಯ ಮಾಧ್ಯಮಗಳು ಈ ಪ್ರಕರಣದ ಬಗ್ಗೆ ಮೌನ ವಹಿಸಿವೆ ಎಂದು ಮೊಹಮ್ಮದ್ ಝುಬೇರ್ ಆರೋಪಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth