11:54 AM Tuesday 21 - October 2025

ಬಿಸಿಲಿನ ತಾಪದಿಂದ ಹಜ್ ಯಾತ್ರಿಕರಿಗೆ ತೊಂದರೆ: 35 ಕ್ಕಿಂತಲೂ ಹೆಚ್ಚಿನ ಭಾರತೀಯ ಹಾಜಿಗಳ ಸಾವು

01/07/2023

ಈ ಬಾರಿ ಹಜ್ ಯಾತ್ರೆಗೆ ಹೋದ ಹಾಜಿಗಳು ಬಿಸಿಲ ತಾಪದಿಂದ ಕಂಗಾಲಾಗಿದ್ದರು. ಸುಮಾರು ಏಳು ಸಾವಿರ ಹಾಜಿಗಳು ಬಿಸಿಲಿನ ತಾಪದಿಂದಾಗಿ ಚಿಕಿತ್ಸೆ ಪಡೆದಿದ್ದಾರೆ ಎಂದು ವರದಿಯಾಗಿದೆ.

ಕೇವಲ ದುಲ್ಹಜ್ ಹತ್ತರ ಒಂದೇ ದಿನ ಎರಡು ಸಾವಿರಕ್ಕಿಂತಲೂ ಅಧಿಕ ಹಾಜಿಗಳು ಚಿಕಿತ್ಸೆ ಪಡೆದಿದ್ದಾರೆ. ಈ ನಡುವೆ 35 ರಷ್ಟು ಭಾರತೀಯ ಹಾಜಿಗಳು ವಿವಿಧ ಕಾರಣಗಳಿಂದಾಗಿ ಮೃತಪಟ್ಟಿದ್ದಾರೆ.

ಇತ್ತೀಚಿನ ವರ್ಷಗಳಲ್ಲೇ ಈ ಬಾರಿಯ ಹಜ್ ನ ವೇಳೆ ಅತೀವ ಬಿಸಿಲಿತ್ತು. ಅದರಲ್ಲೂ ದುಲ್ಹಜ್ ಹತ್ತರಂದು ಬಿಸಿಲಿನ ತಾಪ ಅಧಿಕವಾಗಿತ್ತು. ಇದರಿಂದಾಗಿ ಸಾಕಷ್ಟು ಹಾಜಿಗಳು ತೊಂದರೆ ಅನುಭವಿಸಿದರು.

ವಿಶೇಷವಾಗಿ ವೃದ್ಧರು ಮತ್ತು ರೋಗಿಗಳು ಬಿಸಿಲಿನ ತಾಪ ತಡೆಯಲಾಗದೆ ಚಿಕಿತ್ಸೆಯ ಮೊರೆ ಹೋದರು. ಭಾರತೀಯ ಹಾಜಿಗಳಿಗೂ ಬಿಸಿಲಿನ ತೊಂದರೆ ಅನುಭವಕ್ಕೆ ಬಂದಿದ್ದು ಅವರು ಕೂಡ ಚಿಕಿತ್ಸೆ ಪಡೆದಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version