10:51 AM Tuesday 27 - January 2026

ಒತ್ತೆಯಾಳಾಗಿದ್ದ ಇಸ್ರೇಲಿಗರನ್ನು ಬಿಡುಗಡೆ ಮಾಡುವಾಗ ಹೃದಯಸ್ಪರ್ಶಿ ಬೀಳ್ಕೊಡುಗೆ ಕೊಟ್ಟ ಹಮಾಸ್

21/01/2025

ಕದನ ವಿರಾಮ ಒಪ್ಪಂದದಂತೆ ತನ್ನ ಒತ್ತೆಯಲ್ಲಿದ್ದ ಬಂಧಿಗಳನ್ನು ಬಿಡುಗಡೆಗೊಳಿಸುವಾಗ ಹಮಾಸ್ ನಡೆದುಕೊಂಡ ರೀತಿ ಎಲ್ಲರ ಗಮನವನ್ನು ಸೆಳೆದಿದೆ. ಕೈದಿಗಳ ಜೊತೆ ಅದು ನಡೆದುಕೊಂಡ ರೀತಿ ಮತ್ತು ಬೀಳ್ಕೊಟ್ಟ ರೀತಿ ಎಲ್ಲರ ಪ್ರಶಂಸೆಗೂ ಪಾತ್ರವಾಗಿದೆ. ಮುಖ್ಯವಾಗಿ ಮೂರು ಮಂದಿ ಒತ್ತೆಯಾಗಳನ್ನು ಹಮಾಸ್ ಬಿಡುಗಡೆಗೊಳಿಸಿತ್ತು.

ಅದಕ್ಕೆ ಪ್ರತಿಯಾಗಿ ಇಸ್ರೇಲ್ 90 ಮಂದಿ ಫೆಲೆಸ್ತೀನಿ ಕೈದಿಗಳನ್ನು ಬಿಡುಗಡೆಗೊಳಿಸಿತ್ತು. ತನ್ನ ಬಳಿ ಒತ್ತೆಯಾಳಾಗಿ ಇದ್ದ ಡೋರನ್ ಸ್ಟೈನ್ ಬ್ರಾಚ್, ಎಮಿಲಿ ದಮಾರಿ ಮತ್ತು ರೋಮಿ ಗೊನೆನು ಎಂಬವರಿಗೆ ಹಮಾಸ್ ಅತ್ಯಂತ ಹೃದಯಸ್ಪರ್ಶಿಯಾಗಿ ಬೀಳ್ಕೊಡುಗೆ ನೀಡಿತು. ಈ ಮೂವರಿಗೂ ಉಡುಗೊರೆಯನ್ನು ನೀಡಿ ಕಳುಹಿಸಿಕೊಟ್ಟಿತ್ತು. ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲಾಗಿದೆ.

ಹಮಾಸ್ ನ ಹೋರಾಟ ವಿಭಾಗವಾದ ಅಲ್ ಕಸ್ಸಾಮ್ ಬ್ರಿಗೇಡ್ ನ ಸದಸ್ಯರು ಈ ಗಿಫ್ಟನ್ನು ನೀಡಿದ್ದಾರೆ. ಈ ಮೂವರೂ ಒತ್ತೆಯಾಳಾಗಿದ್ದ ಸಮಯದಲ್ಲಿ ಬಿಡಿಸಿದ ಚಿತ್ರಗಳು ಮತ್ತು ಸರ್ಟಿಫಿಕೇಟ್ ಗಳನ್ನು ಅಲ್ ಕಸ್ಸಾಮ್ ಬ್ರಿಗೇಡ್ ನ ಚಿಹ್ನೆಯೊಂದಿಗೆ ಬ್ಯಾಗಿನಲ್ಲಿ ಇಟ್ಟು ಈ ಬಂಧಿಗಳಿಗೆ ನೀಡುತ್ತಿರುವ ವಿಡಿಯೋ ವೈರಲಾಗಿದೆ. ಮಾತ್ರವಲ್ಲ ಇಸ್ರೇಲಿ ಪತ್ರಿಕೆಗಳು ಈ ವಿಡಿಯೋದ ಬಗ್ಗೆ ವಿಸ್ತೃತವಾಗಿ ಮಾಹಿತಿಯನ್ನ ಹಂಚಿಕೊಂಡಿವೆ.

ಹಿಬ್ರು ಮತ್ತು ಅರಬಿ ಭಾಷೆಯಲ್ಲಿ ಬರೆದಿರುವ ಕಾಗದಗಳುಳ್ಳ ಫೋಲ್ಡರ್ ಅನ್ನು ದಮಾರಿಗೆ ನೀಡುತ್ತಿರುವ ಚಿತ್ರ ಮತ್ತು ವಿಡಿಯೋ ಇದಾಗಿದೆ. ವ್ಯಕ್ತಿಯ ಮಾಹಿತಿ, ಇಸ್ರೇಲ್ ಐಡಿ ನಂಬರ್, ಬಂಧಿಗಳಾಗುವಾಗ ಅವರಿದ್ದ ಸ್ಥಳ, ವರ್ಷ ಇತ್ಯಾದಿಗಳನ್ನು ಈ ಕಾಗದದಲ್ಲಿ ದಾಖಲಿಸಲಾಗಿದೆ. ಇದಕ್ಕೆ ಅಲ್ ಕಸ್ಸಾಮ್ ಬ್ರಿಗೇಡ್‌ನ ಕಮಾಂಡರ್ ನ ಸಹಿಯೂ ಇದೆ. ರೆಡ್ ಕ್ರಾಸ್ ನ ನೇತೃತ್ವದಲ್ಲಿ ಇಸ್ರೇಲ್ ಸೈನಿಕರಿಗೆ ಈ ಬಂಧಿಗಳನ್ನು ಹಸ್ತಾಂತರಿಸಿದ ಬಳಿಕ ಇವರು ಪ್ರಾಥಮಿಕ ಪರೀಕ್ಷೆಗೆ ತೆರಳುವ ವರೆಗೆ ಈ ಮೂವರೂ ಒತ್ತೆಯಾಳುಗಳು ತಮ್ಮ ಬ್ಯಾಗುಗಳೊಂದಿಗೆ ನಡೆಯುತ್ತಿರುವ ದೃಶ್ಯವನ್ನು ಇಸ್ರೇಲಿ ಸೇನೆ ಬಿಡುಗಡೆಗೊಳಿಸಿದೆ.

15 ತಿಂಗಳ ಕಾಲ ಇಸ್ರೇಲ್ ನ ದಾಳಿಯಿಂದ ಈ ಒತ್ತೆಯಾಳುಗಳನ್ನು ಕಾಪಿಟ್ಟ ಹಮಾಸ್ ಮತ್ತು ಹೀಗೆ ಬಿಡುಗಡೆಗೊಳಿಸುವಾಗ ಅತ್ಯಂತ ಆದರದಿಂದ ಬೀಳ್ಕೊಟ್ಟ ರೀತಿ ಜಾಗತಿಕವಾಗಿ ಭಾರಿ ಪ್ರಶಂಸೆಗೆ ಪಾತ್ರವಾಗಿದೆ. ಹಮಾಸ್ ನೀಡುತ್ತಿರುವ ಬ್ಯಾಗುಗಳನ್ನು ನಗುಮುಖದಿಂದ ಸ್ವೀಕರಿಸುವ ಒತ್ತೆಯಾಳುಗಳ ಬಗ್ಗೆ ವಿವಿಧ ರೀತಿಯ ಅಭಿಪ್ರಾಯಗಳು ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತವಾಗಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ

Exit mobile version