ಒಗೆದ ಬಳಿಕ ಸೀರೆ ಟವೆಲ್ ಥರ ಆಯ್ತು: ಚುನಾವಣೆ ವೇಳೆ ಸಾರಿ ಸ್ಟೋರಿ ಹೇಳಿದ ಕೈ ಶಾಸಕ

narendra
28/01/2023

ಚಾಮರಾಜನಗರ: 1600 ರೂ. ಅಂತಾ ಒಬ್ಬರು ಸೀರೆ ಕೊಟ್ಟಿದ್ದರು ಅದೂ ಒಂದೂ ದಿನವೂ ಬಾಳಿಕೆ ಬರಲಿಲ್ಲ ಎಂದು ಬಿಜೆಪಿ ಟಿಕೆಟ್ ಆಕಾಂಕ್ಷಿ ನಿಶಾಂತ್ ಹೆಸರು ಹೇಳದೇ  ಪರೋಕ್ಷವಾಗಿ ಕೈ ಶಾಸಕ ನರೇಂದ್ರ ಟಾಂಗ್ ಕೊಟ್ಟಿದ್ದಾರೆ.

ಹನೂರು ತಾಲೂಕಿನ ದುಗ್ಗಟ್ಟಿ ಗ್ರಾಮದ ಸಮುದಾಯ ಭವನವನ್ನು ಉದ್ಘಾಟಿಸಿ ಅವರು ಮಾತನಾಡಿ, ಬೆಂಗಳೂರಿನಿಂದ ಯಾರೋ ಧಣಿಗಳು ಬಂದು 1600 ರೂ. ಸೀರೆ ಎಂದು ಕೊಟ್ಟಿದ್ದರು. ಅದು ಒಂದು ದಿನವೂ ಬಾಳಿಕೆ ಬರಲಿಲ್ಲ, ಒಗೆದ ಬಳಿಕ ಸೀರೆ ಟವೆಲ್ ಥರ ಆಯ್ತು ಎಂದು‌ ಕಿಡಿಕಾರಿದ್ದಾರೆ.‌

ರಗ್, ಸೀರೆ, ಹೆಂಡ ಕೊಟ್ಟು ಜನರನ್ನು ಕೊಂಡುಕೊಳ್ಳಲಾಗಲ್ಲ, ಈಗಿನ‌ ಬಿಜೆಪಿ ಸರ್ಕಾರ ಇಲ್ಲಿಯ ತನಕ ಒಂದೂ ಸಮುದಾಯ ಭವನವನ್ನೂ ಕೊಟ್ಟಿಲ್ಲ, ಒಡಕು ಮೂಡಿಸಿ‌ ಅಧಿಕಾರ ಹಿಡಿಯುವುದು ಬ್ರಿಟಿಷರ ಕಾಲ, ಇಲ್ಲಿನ ಜನರಿಗೆ ಗೊತ್ತಿದೆ ಯಾರಿಗೆ ಮತ ಹಾಕಬೇಕೆಂದು ಎಂದು ಕಿಡಿಕಾರಿದರು.

YouTube video player

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version