ದೆಹಲಿಗೆ ರೈತರ ಚಲೋ: ಹರಿಯಾಣ ಮತ್ತು ಪಂಜಾಬ್ ಪೊಲೀಸರು ಫುಲ್ ಅಲರ್ಟ್; ಗಡಿಯಲ್ಲಿ ಬಿಗಿ ಭದ್ರತೆ

1,200 ಟ್ರಾಕ್ಟರ್ ಟ್ರಾಲಿಗಳು, 300 ಕಾರುಗಳು ಮತ್ತು 10 ಮಿನಿ ಬಸ್ಸುಗಳು ಮತ್ತು ಇತರ ವಾಹನಗಳೊಂದಿಗೆ ಪಂಜಾಬ್-ಹರಿಯಾಣ ಶಂಭು ಗಡಿಯಲ್ಲಿ ಸುಮಾರು 14,000 ರೈತರಿಗೆ ಸೇರಲು ಪಂಜಾಬ್ ಪೊಲೀಸರು ಬುಧವಾರ ಅನುಮತಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಏತನ್ಮಧ್ಯೆ, ಕಾನೂನು ಮತ್ತು ಸುವ್ಯವಸ್ಥೆಯ ಕಾಳಜಿಯನ್ನು ಉಲ್ಲೇಖಿಸಿ ಶಂಭು ಗಡಿಯಿಂದ ಬುಲ್ಡೋಜರ್ ಗಳು ಮತ್ತು ಇತರ ಮಣ್ಣು ಸಾಗಿಸುವ ಉಪಕರಣಗಳನ್ನು ವಶಪಡಿಸಿಕೊಳ್ಳುವಂತೆ ಹರಿಯಾಣ ಪೊಲೀಸರು ಪಂಜಾಬ್ ಸಹವರ್ತಿಗಳನ್ನು ಒತ್ತಾಯಿಸಿದ್ದಾರೆ.
ಮಾಧ್ಯಮಗಳು ಗಡಿಯಿಂದ ಒಂದು ಕಿಲೋಮೀಟರ್ ದೂರದಲ್ಲಿರುವುದನ್ನು ಖಚಿತಪಡಿಸಿಕೊಳ್ಳಲು ಪಂಜಾಬ್ ಪೊಲೀಸರಿಗೆ ಸೂಚಿಸಲಾಗಿದೆ.
ಬುಧವಾರ ರೈತರು ‘ದೆಹಲಿ ಚಲೋ’ ಮೆರವಣಿಗೆಯನ್ನು ಪುನರಾರಂಭಿಸುವ ಒಂದು ದಿನ ಮೊದಲೇ ಈ ಆದೇಶ ಬಂದಿದೆ.
ಗಡಿಯಲ್ಲಿ ಬ್ಯಾರಿಕೇಡ್ ಗಳನ್ನು ಮುರಿಯಲು ಪ್ರತಿಭಟನಾ ನಿರತ ರೈತರು ವಾಹನಗಳನ್ನು ಬಳಸಿದರೆ ಅವುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಹರಿಯಾಣ ಪೊಲೀಸರು ಹೇಳಿದ್ದಾರೆ.
ಕೆಲ ಯಂತ್ರಗಳನ್ನು ಪ್ರತಿಭಟನಾಕಾರರು ಬ್ಯಾರಿಕೇಡ್ ಗಳನ್ನು ಹಾನಿಗೊಳಿಸಲು ಬಳಸಲು ಉದ್ದೇಶಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇದರಿಂದಾಗಿ ಕರ್ತವ್ಯದಲ್ಲಿ ನಿಯೋಜಿಸಲಾದ ಪೊಲೀಸರು ಮತ್ತು ಅರೆಸೈನಿಕ ಪಡೆಗಳಿಗೆ ಗಂಭೀರ ಅಪಾಯವಿದೆ ಮತ್ತು ಹರಿಯಾಣದ ಭದ್ರತಾ ಸನ್ನಿವೇಶದಲ್ಲಿ ರಾಜಿ ಮಾಡಿಕೊಳ್ಳುವ ಸಾಧ್ಯತೆಯಿದೆ ಎಂದು ಪೊಲೀಸ್ ಮೂಲಗಳು ತಿಳಿಸಿದೆ.