ಸ್ನೇಹಿತ ಅಪಘಾತದಲ್ಲಿ ಮೃತಪಟ್ಟ ಸುದ್ದಿ ಕೇಳಿ ಹೃದಯಾಘಾತದಿಂದ ಮೃತಪಟ್ಟ ಇನ್ನೋರ್ವ ಸ್ನೇಹಿತ!

shivamogga friends
21/08/2023

ಶಿವಮೊಗ್ಗ: ಅಪಘಾತದಲ್ಲಿ ತನ್ನ ಗೆಳೆಯ ಸಾವಿನ್ನಪ್ಪಿದ ಸುದ್ದಿ ಕೇಳಿದ ಸ್ನೇಹಿತ ಹೃದಯಾಘಾತದಿಂದ ಮೃತಪಟ್ಟ ದಾರುಣ ಘಟನೆ  ಶಿವಮೊಗ್ಗದಲ್ಲಿ ನಡೆದಿದೆ.

30 ವರ್ಷ ವಯಸ್ಸಿನ ಆನಂದ್ ಹಾಗೂ 35 ವರ್ಷ ವಯಸ್ಸಿನ ಸಾಗರ್ ಸ್ನೇಹಿತರಾಗಿದ್ದರು. ಶಿಕಾರಿಪುರ ತಾಲೂಕಿನ ಪುಣೇದಹಳ್ಳಿಯ ಆನಂದ್ ಹಾಗೂ ನವರಾಜ್, ಸ್ನೇಹಿತನ ಹುಟ್ಟುಹಬ್ಬಕ್ಕೆ ಕೇಕ್ ತರಲು ಹೊರಟಿದ್ದ ವೇಳೆ ಶಿಕಾರಿಪುರ ಮತ್ತು ಶಿರಾಳಕೊಪ್ಪ ನಡುವಿನ ಕೆಎಸ್ ಆರ್ ಟಿಸಿ ಡಿಪೋ ಬಳಿಯಲ್ಲಿ ಎದುರಿನಿಂದ ಬಂದ ಬೈಕ್ ಗೆ ಇವರ ಬೈಕ್ ಡಿಕ್ಕಿ ಹೊಡೆದಿದೆ.

ಈ ಅಪಘಾತದಲ್ಲಿ ಆನಂದ್ ದಾರುಣವಾಗಿ ಸಾವನ್ನಪ್ಪಿದ್ದರೆ, ಜೊತೆಗಿದ್ದ ನವರಾಜ್ ಅದೃಷ್ಟವಶಾತ್ ಪಾರಾಗಿದ್ದ. ಬೈಕ್ ಅಪಘಾತದಲ್ಲಿ  ಆನಂದ್ ಸಾವನ್ನಪ್ಪಿದ್ದ ಸುದ್ದಿ ಕೇಳಿ ಆಘಾತಕ್ಕೊಳಗಾದ ಸ್ನೇಹಿತ ಸಾಗರ್ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಘಟನೆ ಸಂಬಂಧ ಶಿಕಾರಿಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚಿನ ಸುದ್ದಿ

Exit mobile version