12:10 PM Tuesday 28 - October 2025

ಬೃಹತ್ ಗಾತ್ರದ ಜಿಂಕೆಯನ್ನು ಬೇಟೆ ಮಾಡಿ ಪಾರ್ಟಿ ಮಾಡುತ್ತಿದ್ದಾಗ ಅಧಿಕಾರಿಗಳ ದಾಳಿ!

chikkamagalore
21/08/2023

ಚಿಕ್ಕಮಗಳೂರು: ಭದ್ರಾ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಿರುವ ಪ್ರದೇಶದಲ್ಲಿ ಜಿಂಕೆಯನ್ನು ಬೇಟೆಯಾಡಿ ಬಾಡೂಟಕ್ಕೆ ತಯಾರಿ ಮಾಡುತ್ತಿದ್ದ ವೇಳೆ 6 ಮಂದಿ ಆರೋಪಿಗಳನ್ನ ಪೊಲೀಸರು ಬಂಧಿಸಿದ ಘಟನೆ ಚಿಕ್ಕಮಗಳೂರು ತಾಲೂಕಿನ ಮೇಲಿನ ಹುಲುವತ್ತಿ ಗ್ರಾಮದ ಅರಣ್ಯ ವ್ಯಾಪ್ತಿಯಲ್ಲಿ ನಡೆದಿದೆ.

ಶಿಕಾರಿ ಮಾಡಿದ‌ ಆರೋಪದಲ್ಲಿ ಆರು ಮಂದಿ ಯುವಕರನ್ನು  ಅಧಿಕಾರಿಗಳು ಬಂಧಿಸಿದ್ದಾರೆ. ಭದ್ರಾ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಿರುವ  ಮುತ್ತೊಡಿ ಪ್ರಾದೇಶಿಕ ವಲಯದ ವ್ಯಾಪ್ತಿಯ ಕಾಫಿ ತೋಟಕ್ಕೆ‌ ಹೊಂದಿಕೊಂಡಿರುವ ಪ್ರದೇಶದಲ್ಲಿ ಜಿಂಕೆ‌ ಶಿಕಾರಿ ಮಾಡಲಾಗಿದೆ. ಶಿಕಾರಿಯ ನಂತರ ಅಲ್ಲೇ ಬಾಡೂಟ ಮಾಡಲು ಸಿದ್ಧತೆ ನಡೆಸುತ್ತಿದ್ದಾಗ ಸ್ಥಳೀಯರು ಅರಣ್ಯಾಧಿಕಾರಿಗಳಿ ಮಾಹಿತಿ ನೀಡಿದ್ದು, ಪ್ರಾದೇಶಿಕ ಅರಣ್ಯ ವಿಭಾಗದ ಅಧಿಕಾರಿಗಳು ರೈಡ್ ಮಾಡಿ, ಆರೋಪಿಗಳನ್ನ ಬಂಧಿಸಿದ್ದಾರೆ.

ಆರೋಪಿಗಳಿಂದ 8 ಕೆ.ಜಿ. ಜಿಂಕೆ ಮಾಂಸ ಜೊತೆಗೆ ನಾಡ ಬಂದೂಕು ವಶಪಡಿಸಿಕೊಳ್ಳಲಾಗಿದೆ. ಇನ್ನೂ ಪಾರ್ಟಿ ಸ್ಥಳದಲ್ಲಿ ಎನ್.ಜಿ.ಓ ಸದಸ್ಯರಿದ್ದರು ಎನ್ನುವ ಆರೋಪ ಕೂಡ ಕೇಳಿ ಬಂದಿದೆ.

ಇತ್ತೀಚಿನ ಸುದ್ದಿ

Exit mobile version