5:22 AM Wednesday 22 - October 2025

ದೆಹಲಿಯಲ್ಲಿ ವರುಣನ ಅಬ್ಬರ; ಬಿಸಿಲಿನಿಂದ ಕಂಗಲಾಗಿದ್ದ ರಾಷ್ಟ್ರ ರಾಜಧಾನಿ ಜನರಿಗೆ ಮಳೆಯ ಸಿಂಚನ

19/08/2023

ದೆಹಲಿಯ ಅನೇಕ ಪ್ರದೇಶಗಳಲ್ಲಿ ಶನಿವಾರ ಬೆಳಿಗ್ಗೆ ಭಾರೀ ಮಳೆ ಸುರಿಯಿತು. ಬಿಸಿಲಿನ ತಾಪವನ್ನು ಅನುಭವಿಸುತ್ತಿದ್ದ ನಗರದಲ್ಲಿ ಮಳೆಯ ಸಿಂಚನವಾಯಿತು. ಶುಕ್ರವಾರ ರಾಜಧಾನಿಯಲ್ಲಿ ಯಮುನಾ ನದಿಯ ನೀರಿನ ಮಟ್ಟವು ನಿರ್ಣಾಯಕ ಮಟ್ಟಕ್ಕಿಂತ ಕಡಿಮೆಯಾಗಿತ್ತು. ನದಿಯ ಅಪಾಯದ ಮಟ್ಟವನ್ನು 204.5 ಮೀಟರ್ ಎಂದು ನಿಗದಿಪಡಿಸಲಾಗಿದೆ. ವಿಶೇಷವೆಂದರೆ, ಜುಲೈ 13 ರಂದು ಯಮುನಾ ದೆಹಲಿಯಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿತ್ತು. ಅಂದರೆ 208.66 ಮೀಟರ್ ಎತ್ತರವನ್ನು ತಲುಪಿತ್ತು.

ಹವಾಮಾನ ಇಲಾಖೆಯ ಪ್ರಕಾರ, ದೆಹಲಿಯ ಸಫ್ದರ್ ಜಂಗ್ ಸಿವಿಲ್ ಲೈನ್ಸ್, ಪಟೇಲ್ ನಗರ, ಬುದ್ಧ ಜಯಂತಿ ಪಾರ್ಕ್, ರಾಜೀವ್ ಚೌಕ್, ಐಟಿಒ, ಜಾಫರ್ಪುರ, ನಜಾಫ್ ಗಢ, ದ್ವಾರಕಾ, ಇಂಡಿಯಾ ಗೇಟ್ ಅಕ್ಷರಧಾಮ, ಪಾಲಂ, ಲೋದಿ ರಸ್ತೆ, ಐಜಿಐ ವಿಮಾನ ನಿಲ್ದಾಣ, ಆರ್ ಕೆ ಪುರಂ, ವಸಂತ್ ಕುಂಜ್, ಹೌಜ್ಖಾಸ್, ಮಾಳವೀಯನಗರ, ಇಗ್ನೋ ಪ್ರದೇಶಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮುಂದಿನ 2 ಗಂಟೆಗಳಲ್ಲಿ ದೆಹಲಿ-ಎನ್ಸಿಆರ್ ನ ಹೆಚ್ಚಿನ ಸ್ಥಳಗಳಾದ ಲೋನಿ ದೆಹತ್, ಹಿಂಡನ್ ಎಎಫ್ ಸ್ಟೇಷನ್, ಇಂದಿರಾಪುರಂ, ನೋಯ್ಡಾ, ದಾದ್ರಿ, ಗ್ರೇಟರ್ ನೋಯ್ಡಾ, ಗುರುಗ್ರಾಮ್, ಫರಿದಾಬಾದ್, ಮನೇಸರ್, ಬಲ್ಲಭಗಢದಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ.

ಇತ್ತೀಚಿನ ಸುದ್ದಿ

Exit mobile version