ಹೆಬ್ಬಾಳೆ ಸೇತುವೆ ಮುಳುಗಡೆ: ಕಳಸ–ಹೊರನಾಡು ಸಂಪರ್ಕ ಸಂಪೂರ್ಣ ಬಂದ್

kalasa
23/07/2023

ಚಿಕ್ಕಮಗಳೂರು: ಭಾರೀ ಮಳೆಯ ಹಿನ್ನೆಲೆಯಲ್ಲಿ ಕಳಸ-ಹೊರನಾಡು ಸಂಪರ್ಕ ಸಂಪೂರ್ಣ ಬಂದ್  ಆಗಿದ್ದು, ಹೆಬ್ಬಾಳೆ ಸೇತುವೆ ಮುಳುಗಡೆಯಾಗಿ ವಾಹನ ಸವಾರರು ಪರದಾಡುವಂತಾಗಿದೆ. ಇಲ್ಲಿಗೆ ಇರುವ ಬದಲಿ ಮಾರ್ಗ ಹಳುವಳ್ಳಿಯಲ್ಲಿ ಫುಲ್ ಟ್ರಾಫಿಕ್ ಜಾಮ್ ಆಗಿದ್ದು ಈ ಮಾರ್ಗವೂ ಬಂದ್ ಆಗಿದೆ.

ಬೆಳಗ್ಗಿನಿಂದಲೂ ಸೇತುವೆ ಮೇಲೆ ನೀರು ಏರಿದೆ. ಇನ್ನೂ ಕೂಡ ನೀರು ಸೇತುವೆಯಿಂದ ಇಳಿದಿಲ್ಲ,  ಕ್ಷಣಕ್ಷಣಕ್ಕೂ ಭದ್ರೆಯ ಒಡಲು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಎರಡೂ ಸೈಡ್ ಬ್ಯಾರಿಕೇಡ್ ಹಾಕಿ ಸಂಚಾರ ಬಂದ್ ಮಾಡಿದ್ದಾರೆ.

ಸೇತುವೆ ಮುಳುಗಡೆಯಿಂದಾಗಿ ಬಲಿಗೆ, ಹೊರನಾಡು, ಬಸರೀಕಟ್ಟೆ ಸೇರಿದಂತೆ ಹತ್ತಾರು ಗ್ರಾಮಗಳಿಗೆ ಸಂಪರ್ಕವಿಲ್ಲದಂತಾಗಿದೆ. ಪ್ರವಾಸಿಗರು, ಅನ್ನಪೂರ್ಣೇಶ್ವರಿ ದರ್ಶನಕ್ಕೆ ಬಂದ ಭಕ್ತರು ಪರದಾಡುತ್ತಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 7483551849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version