ಹಿಂದೂ ಯುವಕರ ಹತ್ಯೆಯ ವಿರುದ್ಧ ಸಮಾಜ ಒಗ್ಗಟ್ಟಿನಿಂದ ಪ್ರತಿಕ್ರಿಯಿಸಬೇಕು: ಶ್ರೀವಿದ್ಯಾನಂದ ಸರಸ್ವತಿ ಸ್ವಾಮೀಜಿ

swamyji
05/08/2022

ಮಂಗಳೂರು: ಹಿಂದೂ ಯುವಕರ ಹತ್ಯೆಯ ವಿರುದ್ಧ ಸಮಾಜ ಒಗ್ಗಟ್ಟು ತೋರಿಸುವ ಮೂಲಕ ಪ್ರತಿಕ್ರಿಯೆ ನೀಡಬೇಕು. ಮುಸ್ಲಿಂ ಧರ್ಮಗುರುಗಳು ಮತಾಂಧರ ಕೃತ್ಯಗಳನ್ನು ಖಂಡಿಸಲು ಮುಂದೆ ಬಂದಾಗ ಮಾತ್ರ ಇಂತಹ ಕೃತ್ಯಗಳನ್ನು ತಡೆಯಲು ಸಾಧ್ಯ ಎಂದು ಅಖಿಲ ಭಾರತೀಯ ಸಂತ ಸಮಿತಿ ರಾಜ್ಯ ಪ್ರಮುಖ್, ಚಿಲಿಂಬಿ ಓಂ ಶ್ರೀ ಮಠದ ಶ್ರೀವಿದ್ಯಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ಮಂಗಳೂರಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೂ ಧರ್ಮ ಇರುವುದರಿಂದಲೇ ದೇಶದಲ್ಲಿ ಜಾತ್ಯತೀತತೆ ಉಳಿದಿದೆ. ರಾಜ್ಯದ ಹಿಂದುಗಳ ರಕ್ಷಣೆಗೆ ಬದ್ಧ ಎಂದು ಹೇಳಿರುವ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದ್ದರೂ, ಹಿಂದುಗಳ ಹತ್ಯೆ ನಿಲ್ಲುತ್ತಿಲ್ಲ. ರಾಜ್ಯದಲ್ಲಿ ಗುಪ್ತಚರ ದಳ ದುರ್ಬಲವಾಗಿದೆಯೇ ಎಂದು ಪ್ರಶ್ನಿಸಿದ ಅವರು, ಪ್ರವೀಣ್ ಪ್ರಕರಣವೇ ಕೊನೆಯಾಗಬೇಕು. ಇನ್ನುಂದೆ ಇಂತಹ ಘಟನೆಗಳು ನಡೆಯದಂತೆ ಸರ್ಕಾರ ಕಠಿಣ ನಿಲುವು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಮುಖ್ಯಮಂತ್ರಿ, ರಾಜ್ಯಪಾಲರು ಹಾಗೂ ಗೃಹಸಚಿವರನ್ನು ಭೇಟಿಯಾಗಲು ದಿನಾಂಕ ನಿಗದಿಪಡಿಸಲಾಗಿದ್ದು, ಸಂತ ಸಮಿತಿಯ ರಾಜ್ಯದ ಪ್ರಮುಖ ಸ್ವಾಮೀಜಿಗಳು ನಿಯೋಗದಲ್ಲಿ ಇರಲಿದ್ದಾರೆ ಎಂದು ತಿಳಿಸಿದರು.

ಓಂ ಶ್ರೀ ಮಠದ ಮಾತಾ ಶ್ರೀ ಶಿವಜ್ಞಾನ ಮಹೀ ಸರಸ್ವರಸ್ವತಿ, ಸಂತ ಸಮಿತಿ ಸಂಘಟನಾ ಕಾರ್ಯದರ್ಶಿ ಉಡುಪಿ ದ್ವಾರಕಾಮಹಿ ಮಠದ ಶ್ರೀ ಸಾಯಿ ಈಶ್ವರ್‌ ಗುರೂಜಿ ಉಪಸ್ಥಿತರಿದ್ದರು.
YouTube video player

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ

Exit mobile version