5:52 PM Wednesday 20 - August 2025

ಆರು ಇಸ್ರೇಲ್ ಸೈನಿಕರನ್ನು ಕೊಂದ ಹಿಜ್ಬುಲ್ಲಾ ಪಡೆ: ನೆತನ್ಯಾಹು ಪಡೆಗೆ ನಡುಕ

14/11/2024

ಹಿಜ್ಬುಲ್ಲಾ ಜೊತೆಗಿನ ಘರ್ಷಣೆಯಲ್ಲಿ ಆರು ಇಸ್ರೇಲಿ ಸೈನಿಕರು ಹತರಾಗಿದ್ದಾರೆ. ಸ್ವತಃ ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಇದನ್ನು ದೃಢಪಡಿಸಿದೆ. ದಕ್ಷಿಣ ಲೆಬನಾನ್‌ನಲ್ಲಿ ನೆಲದ ಕಾರ್ಯಾಚರಣೆಯನ್ನು ವಿಸ್ತರಿಸುವುದಾಗಿ IDF ಘೋಷಿಸಿದ ನಂತರ ಈ ದಾಳಿ ನಡೆದಿದೆ ಇದು ಇಸ್ರೇಲಿ ಸೇನೆಗೆ ಭಾರಿ ಹಿನ್ನಡೆಯುಂಟಾಗಿದೆ ಎನ್ನಲಾಗಿದೆ . ಸೈನಿಕರು ಗಡಿಯಿಂದ ಹಳ್ಳಿಗಳಿಗೆ ತೆರಳುತ್ತಿದ್ದಾಗ ಎನ್‌ಕೌಂಟರ್ ನಡೆದಿದೆ. ಗೊಲಾನಿ ಬ್ರಿಗೇಡ್‌ನ 51ನೇ ಬೆಟಾಲಿಯನ್‌ನ ಯುವ ವಯಸ್ಸಿನ ಸೈನಿಕರು ಸಾವನ್ನಪ್ಪಿದ್ದಾರೆ.

ದಕ್ಷಿಣ ಲೆಬನಾನ್‌ನ ಹಳ್ಳಿಯೊಂದರ ಕಟ್ಟಡದೊಳಗೆ ನಾಲ್ವರು ಹಿಜ್ಬುಲ್ಲಾ ಸದಸ್ಯರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಸೈನಿಕರು ಸಾವನ್ನಪ್ಪಿದ್ದಾರೆ ಎಂದು IDF ನ ಪ್ರಾಥಮಿಕ ತನಿಖೆ ಸೂಚಿಸಿದೆ. ಒಬ್ಬ ಯೋಧ ಕೂಡ ಗಾಯಗೊಂಡಿದ್ದಾರೆ. ಏತನ್ಮಧ್ಯೆ, ಇಸ್ರೇಲಿ ಪಡೆಗಳು ಬೈರುತ್‌ನ ದಕ್ಷಿಣ ಉಪನಗರಗಳ ಮೇಲೆ ದಾಳಿ ಮಾಡುವುದನ್ನು ಮುಂದುವರೆಸಿದೆ. ಈ ಪ್ರದೇಶದಲ್ಲಿ ಇಸ್ರೇಲ್ ವೈಮಾನಿಕ ದಾಳಿ ನಡೆಸಿತು. 20ಕ್ಕೂ ಹೆಚ್ಚು ನಾಗರಿಕರು ಸಾವನ್ನಪ್ಪಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ

Exit mobile version