11:39 PM Saturday 23 - August 2025

ಲೈಂಗಿಕ ಕಿರುಕುಳ ಪ್ರಕರಣ: ಬಂಧಿಸಲು ಹೋದ ಮುಂಬೈ ಪೊಲೀಸರ ಮೇಲೆ ರೌಡಿಶೀಟರ್ ಹಲ್ಲೆ

27/09/2023

ಮುಂಬೈ: ಲೈಂಗಿಕ ಕಿರುಕುಳ ಪ್ರಕರಣದಲ್ಲಿ ತನ್ನನ್ನು ಬಂಧಿಸಲು ಬಂದ ಮುಂಬೈ ಪೊಲೀಸರ ತಂಡದ ಮೇಲೆ ಕ್ರಿಮಿನಲ್ ಹಿನ್ನೆಲೆಯ 40 ವರ್ಷದ ವ್ಯಕ್ತಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಕಳೆದ ವರ್ಷ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಮಹೇಶ್ ಮೋಹನ್ ಶೆಟ್ಟಿ ಅಲಿಯಾಸ್ ಕೋಲು ಎಂಬಾತನನ್ನು ಬಂಧಿಸಲು ಬೋರಿವಲಿ ಪೊಲೀಸ್ ಠಾಣೆಯ ಪೊಲೀಸರ ತಂಡವು ರತ್ನಾಬಾಯಿ ಚಾವ್ಲ್ ಗೆ ತೆರಳಿತ್ತು.

ಇದೇ ವೇಳೆ ಆರೋಪಿಯು ಆಕ್ರಮಣಕಾರಿಯಾಗಿ ವರ್ತಿಸಿ ಕಾನ್ಸ್ ಟೇಬಲ್ ಸ್ವಪ್ನಿಲ್ ಶರದ್ ಪವಾರ್ ಅವರನ್ನು ಒದ್ದು ಕಲ್ಲಿನಿಂದ ಹಲ್ಲೆ ನಡೆಸಿದ್ದಾನೆ. ಪೊಲೀಸರ ತಂಡವು ಆರೋಪಿಯನ್ನು ಬಂಧಿಸಿ ಬೋರಿವಲಿ ಪೊಲೀಸ್ ಠಾಣೆಗೆ ಕರೆತಂದಿದೆ. ನಂತರ ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 353 (ಸರ್ಕಾರಿ ನೌಕರನನ್ನು ತನ್ನ ಕರ್ತವ್ಯವನ್ನು ನಿರ್ವಹಿಸದಂತೆ ತಡೆಯಲು ಹಲ್ಲೆ ಅಥವಾ ಕ್ರಿಮಿನಲ್ ಬಲಪ್ರಯೋಗ) ಮತ್ತು ಮುಂಬೈ ಪೊಲೀಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಮಹೇಶ್ ಮೋಹನ್, ಅಪಹರಣ ಮತ್ತು ಅತ್ಯಾಚಾರ ಸೇರಿದಂತೆ ಹಲವಾರು ಗಂಭೀರ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಈ ಹಿಂದೆ ಗೋರೆಗಾಂವ್, ಬೋರಿವಾಲಿ ಮತ್ತು ಕಂಡಿವಾಲಿಯಂತಹ ಪ್ರದೇಶಗಳನ್ನು ಒಳಗೊಂಡ ಮುಂಬೈ ಪೊಲೀಸರ ವಲಯ -11 ರ ವ್ಯಾಪ್ತಿಯಿಂದ ಹೊರಬಂದಿದ್ದರು.

ಇತ್ತೀಚಿನ ಸುದ್ದಿ

Exit mobile version