ಭೀಕರ ಸರಣಿ ಅಪಘಾತ: ದಂಪತಿಯ ದಾರುಣ ಸಾವು, 1 ವರ್ಷದ ಮಗು ಗಂಭೀರ

chikkamagaluru
13/09/2023

ಚಿಕ್ಕಮಗಳೂರು: ಭೀಕರ ಸರಣಿ ಅಪಘಾತವೊಂದರಲ್ಲಿ ದಂಪತಿ ದಾರುಣವಾಗಿ ಸಾವನ್ನಪ್ಪಿದ್ದು, ಒಂದು ವರ್ಷದ ಮಗು ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಹಿರೇಗೌಜ ಸಮೀಪ ನಡೆದಿದೆ.

ಶಿವಮೊಗ್ಗ ಮೂಲದ ಸಯ್ಯದ್ ಆಸೀಫ್ (38), ಮಾಜಿನಾ (33) ಸ್ಥಳದಲ್ಲೇ ಮೃತಪಟ್ಟವರು ಎಂದು ಗುರುತಿಸಲಾಗಿದೆ. ಕಾರು, ಟಿಪ್ಪರ್, ಬೈಕ್ ನಡುವೆ ಅಪಘಾತ ನಡೆದಿದೆ. ಒಂದು ವರ್ಷದ ಮಗು ಗಂಭೀರವಾಗಿ ಗಾಯಗೊಂಡಿದೆ.

ಟಿಪ್ಪರ್ ಲಾರಿ ಚಾಲಕ ಸ್ಥಳದಿಂದ ಪರಾರಿ ಚಿಕ್ಕಮಗಳೂರಿನಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ದಂಪತಿ ಅಪಘಾತಕ್ಕೆ ಬಲಿಯಾಗಿದ್ದಾರೆ. ಕಳೆದ ರಾತ್ರಿ ಚಿಕ್ಕಮಗಳೂರು ತಾಲೂಕಿನ ಹಿರೇ ಗೌಜ ಗ್ರಾಮದ ಸಖರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ನಡೆದಿದೆ.

ಇತ್ತೀಚಿನ ಸುದ್ದಿ

Exit mobile version