ಬಸ್ ನ್ನು ಅಡ್ಡಗಟ್ಟಿ ಕಬ್ಬಿಗಾಗಿ ಹುಡುಕಾಡಿದ ಕಾಡಾನೆ: ಕಬ್ಬು ಇಲ್ಲ ಎಂದು ತಿಳಿದಾಗ ಮಾಡಿದ್ದೇನು ನೋಡಿ?
13/09/2023
ಚಾಮರಾಜನಗರ: ತಮಿಳುನಾಡು ಸರ್ಕಾರಿ ಬಸ್ ನ್ನು ಅಡ್ಡಗಟ್ಟಿದ ಗಜರಾಜ ಕಬ್ಬು ಎಲ್ಲಿದೆ ಎಂದು ಹುಡುಕಾಡಿದ ಘಟನೆ ಚಾಮರಾಜನಗರ ಜಿಲ್ಲೆ ಗಡಿ ತಮಿಳುನಾಡಿನ ಅಸನೂರು ಬಳಿ ನಡೆದಿದೆ.
ಕಬ್ಬಿನ ಲಾರಿಗಳ ಅಡ್ಡಗಟ್ಟಿ ಈ ಕಾಡಾನೆ ಕಬ್ಬು ವಸೂಲಿ ಮಾಡುತ್ತಿತ್ತು. ಆದ್ರೆ ಈ ಬಾರಿ ಬಸ್ ನ್ನು ಅಡ್ಡಗಟ್ಟಿದ ಕಾಡಾನೆ, ಕಬ್ಬು ಎಲ್ಲಿದೆ ಎಂದು ಹುಡುಕಾಡಿದಲ್ಲದೇ ಅರ್ಧಗಂಟೆಗೂ ಹೆಚ್ಚು ಕಾಲ ರಾಷ್ಟ್ರೀಯ ಹೆದ್ದಾರಿಯಲ್ಲೇ ನಿಂತಿದೆ.
ಹಿಂದೆ ಕಬ್ಬು ಹಾಗೂ ತರಕಾರಿ ತುಂಬಿದ ಲಾರಿಗಳನ್ನ ಅಡ್ಡಗಟ್ಟುತ್ತಿದ್ದ ಕಾಡಾನೆ ಲಾರಿ ಅಂದುಕೊಂಡು ಬಸ್ ನ್ನು ಅಡ್ಡಗಟ್ಟಿದೆ. ಬಸ್ಸಿನಲ್ಲಿ ಕಬ್ಬು ಇದೆಯಾ ಎಂದು ತಡಕಾಡಿದೆ. ಕೊನೆಗೆ ಇದರಲ್ಲಿ ಕಬ್ಬು ಇಲ್ಲ ಎಂದು ಅರಿವಾದ ಬಳಿಕ ಬಸ್ ನ್ನು ತೆರಳಲು ಬಿಟ್ಟು ತನ್ನ ಪಾಡಿಗೆ ತೆರಳಿದೆ.

























