1:58 AM Wednesday 28 - January 2026

ಹೊಟ್ಟೆ ನೋವು ಎಂದು ಹೋದ ಮಹಿಳೆಯ ಆಸ್ಪತ್ರೆ ಬಿಲ್ 6 ಕೋಟಿ

31/01/2021

ಬೆಂಗಳೂರು:  ಹೊಟ್ಟೆ ನೋವು ಎಂದು ಆಸ್ಪತ್ರೆಗೆ ಹೋದ ಮಹಿಳೆಯನ್ನು ವೈದ್ಯರು ಕೋಮಾಸ್ಥಿತಿಗೆ ತಳ್ಳಿದ್ದು, ಬರೋಬ್ಬರಿ 6 ಕೋಟಿ ಬಿಲ್ ಮಾಡಿದ್ದಾರೆ ಎಂದು ಮಹಿಳೆಯ ಪತಿ ಮಣಿಪಾಲ್ ಆಸ್ಪತ್ರೆಯ ವಿರುದ್ಧ ಆರೋಪಿಸಿದ್ದಾರೆ.

ರಿಜೇಶ್ ನಾಯರ್ ಎಂಬವರು ಮಣಿಪಾಲ್ ಆಸ್ಪತ್ರೆಯ ವಿರುದ್ಧ ಆರೋಪ ಮಾಡಿದ್ದು,  ನನ್ನ ಪತ್ನಿ ಪೂನಮ್ ಳನ್ನು ಹೊಟ್ಟೆ ನೋವಿನ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಿದ್ದೆವು. ಆದರೆ ವೈದ್ಯರ ಯಡವಟ್ಟಿನಿಂದಾಗಿ ಆಕೆ ಕೋಮಾಕ್ಕೆ ಹೋಗಿದ್ದಾಳೆ. ಆಕೆಯ ಮೈಯೆಲ್ಲ ಗಾಯವಾಗಿದೆ. ದಿನ ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾಳೆ ಎಂದು ಅವರು ದೂರಿದ್ದಾರೆ.

ವೈದ್ಯರ ನಿರ್ಲಕ್ಷ್ಯದಿಂದಾಗಿ  ನನ್ನ ಪತ್ನಿ ಐದು ವರ್ಷಗಳಿಂದ ಕೋಮಾದಲ್ಲಿದ್ದಾಳೆ. ಸಿಎಂ, ಪಿಎಂ ಎಲ್ಲರಿಗೂ ದೂರು ನೀಡಿದ್ದೇನೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ನಮ್ಮಂತವರ ಮೇಲೆ ಇಂತಹದ್ದೆಲ್ಲ ಪ್ರಯೋಗ ಮಾಡುತ್ತಿದ್ದಾರೆ ಎಂದು ಅವರು ಕಣ್ಣೀರಿಟ್ಟಿದ್ದಾರೆ.

ಇತ್ತೀಚಿನ ಸುದ್ದಿ

Exit mobile version