7:24 PM Saturday 25 - October 2025

ಹುಲಿ ಉಗುರು, ಆನೆ ದಂತದ ಕಡಗ ಪತ್ತೆ | ಆರೋಪಿಯ ಬಂಧನ

15/12/2020

ಬೆಳಗಾವಿ: ಹುಲಿ ಉಗುರು ಹಾಗೂ ಆನೆಯ ದಂತದಿಂದ ಮಾಡಲಾಗಿದ್ದ ಕಡಗಳನ್ನು ಹೊಂದಿದ್ದ ವ್ಯಕ್ತಿಯೋರ್ವನನ್ನು ಅರಣ್ಯ ಸಂಚಾರಿ ದಳ ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

 ಶಹಾಪುರದ ಕಾಕೇರಿ ಚೌಕ್ ನಿವಾಸಿ ಶ್ರೀರಾಮ ಅರ್ಜುನಸಾ ಬಾಕಳೆ (46) ಬಂಧಿತ ಆರೋಪಿಯಾಗಿದ್ದಾನೆ. ಈತನಿಂದ ಆನೆಯ ದಂತದಿಂದ ಮಾಡಲಾಗಿರುವ  2 ಕಡಗ ಹಾಗೂ 5 ಹುಲಿ ಉಗುರುಗಳನ್ನು  ವಶಪಡಿಸಿಕೊಳ್ಳಲಾಗಿದೆ.

ಬೆಳಗಾವಿ ಅರಣ್ಯ ಸಂಚಾರಿ ದಳದ ಪಿಎಸ್‌ಐ ರೋಹಿಣಿ ಪಾಟೀಲ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ. ಆರೋಪಿ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರಲ್ಲಿ ದೂರು ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ತಿಳಿದು ಬಂದಿದೆ.

ಇತ್ತೀಚಿನ ಸುದ್ದಿ

Exit mobile version