ಮಾನವೀಯತೆ: ಈದ್ ಹಬ್ಬದ ಮಧ್ಯೆ ರೈಲು ಅಪಘಾತದಲ್ಲಿ ಪ್ರಯಾಣಿಕರ ಜೀವ ಉಳಿಸಲು ಮುಸ್ಲಿಂ ಬಾಂಧವರ ಹೋರಾಟ

ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಬಳಿ ನಡೆದ ಕಾಂಚನಜುಂಗಾ ಎಕ್ಸ್‌ಪ್ರೆಸ್ ರೈಲು ಅಪಘಾತದಲ್ಲಿ ಈವರೆಗೆ 15 ಜನರು ಸಾವನ್ನಪ್ಪಿದ್ದಾರೆ. 60ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಈ ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳೀಯರು ಈದ್ ಆಚರಣೆ ಮರೆತು ಜೀವ ಉಳಿಸುವ ಕಾಯಕದಲ್ಲಿ ತೊಡಗಿದ್ದು ಕಂಡು ಬಂತು.
ಸೋಮವಾರ ಈದ್-ಅಲ್-ಅದಾ ಎಲ್ಲೆಡೆ ಆಚರಿಸಲಾಯಿತು. ಆದರೆ, ಕಾಂಚನಜುಂಗಾ ಎಕ್ಸ್‌ಪ್ರೆಸ್ ಅಪಘಾತ ನಡೆದ ಸ್ಥಳದಲ್ಲಿ ಎಂಡಿ ಶಾಹಿಬ್, ಎಂಡಿ ರಾಜು, ಮುಹಮ್ಮದ್ ಮೊಮಿರುಲ್‌ರಂತಹ ಅದೆಷ್ಟೋ ಮಂದಿ ಈದ್ ಮರೆತು ರಕ್ಷಣೆ ಕಾರ್ಯಚರಣೆಯಲ್ಲಿದ್ದರು. ನಿರ್ಮಲ್ ಜೋಟೆ ಗ್ರಾಮದ 150ಕ್ಕೂ ಹೆಚ್ಚು ನಿವಾಸಿಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಆಂಬ್ಯುಲೆನ್ಸ್ ಇಲ್ಲದ ಕಾರಣ ಹಲವರು ತಮ್ಮ ಸ್ವಂತ ವಾಹನಗಳಲ್ಲಿ ಪ್ರಯಾಣಿಕರನ್ನು ಸಮೀಪದ ಆಸ್ಪತ್ರೆಗಳಿಗೆ ಕರೆದೊಯ್ದಿದ್ದಾರೆ. ಇನ್ನು ಸಣ್ಣ ಪುಟ್ಟ ಗಾಯಗೊಂಡ ಪ್ರಯಾಣಿಕರು ಸ್ಥಳೀಯರ ಮನೆಯಲ್ಲಿಯೇ ಚೇತರಿಸಿಕೊಳ್ಳುತ್ತಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಮುಹಮ್ಮದ್ ಮೊಮಿರುಲ್, “ನಾನು ನಮಾಜ್ ಸಲ್ಲಿಸಿ ಹಿಂದಿರುಗಿದ್ದೆ. ಮನೆಯಲ್ಲಿ ಎಲ್ಲರೂ ಸಂಭ್ರಮದಲ್ಲಿದ್ದರು. ಇದ್ದಕ್ಕಿದ್ದಂತೆ ದೊಡ್ಡ ಶಬ್ದ ಕೇಳಿಸಿತು. ಕೂಡಲೇ ಮನೆಯ ಸಮೀಪದ ರೈಲು ಹಳಿಗಳ ಕಡೆಗೆ ಧಾವಿಸಿದೆ, ಗೂಡ್ಸ್ ರೈಲಿನ ಲೋಕೋ ಪೈಲಟ್ ಪ್ಯಾಸೆಂಜರ್ ರೈಲಿನ ಚಕ್ರದಲ್ಲಿ ಸಿಲುಕಿರುವುದು ನೋಡಿದೆ. ನಾನು ಆತನ ರಕ್ಷಣೆಗೆ ಹೋಗುವಾಗಲೇ ಆತ ಸಾವನ್ನಪ್ಪಿದ” ಎಂದು ತನ್ನ ಕಣ್ಣೆದುರೇ ನಡೆದ ಘಟನೆ ವಿವರಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth