ಮದುವೆ ಮನೆಯಲ್ಲಿ ಪತ್ನಿ ಡಾನ್ಸ್ ಮಾಡಿದ್ದಕ್ಕೆ ಹತ್ಯೆ ಮಾಡಿದ ಪತಿ!

crime
12/06/2023

ಮದುವೆ ಮೆರವಣಿಗೆಯಲ್ಲಿ ಡ್ಯಾನ್ಸ್ ಮಾಡಿದ್ದಕ್ಕಾಗಿ ಕೋಪಗೊಂಡ ಪತಿ ಪತ್ನಿಯನ್ನು ಹತ್ಯೆಮಾಡಿರುವ ಘಟನೆ ಬಾಲಸೋರ್ ಜಿಲ್ಲೆಯಲ್ಲಿ ಶನಿವಾರ ರಾತ್ರಿ ನಡೆದಿದೆ.

ಶರ್ಮಿಳಾ ಸಿಂಗ್ (35) ಮೃತ ಮಹಿಳೆಯಾಗಿದ್ದಾರೆ.ಆರೋಪಿಯನ್ನು 43 ವರ್ಷದ ರಾಮ್ ಸಿಂಗ್ ಎಂದು ಗುರುತಿಸಲಾಗಿದೆ. ಈತ ಚಾಲಕನಾಗಿ ಕೆಲಸ ಮಾಡಿತ್ತಿದ್ದ ಎನ್ನಲಾಗಿದೆ.

ದಂಪತಿಗಳು ನೆರೆ ಮನೆಯಲ್ಲಿ ಆಯೋಜಿಸಿದ್ದ ವಿವಾಹ ಸಮಾರಂಭಕ್ಕೆ ಆಗಮಿಸಿದ್ದು, ಸಮಾರಂಭದಲ್ಲಿ ಕೆಲವು ಮಹಿಳೆಯರು ಡ್ಯಾನ್ಸ್ ಮಾಡುತ್ತಿದ್ದು, ಶರ್ಮಿಳಾ ಅವರನ್ನುಡ್ಯಾನ್ಸ್ ಮಾಡುವಂತೆ ಆಹ್ವಾನಿಸಿದ್ದರು ಎನ್ನಲಾಗಿದೆ. ಆಕೆ ನಿರಾಕರಿಸಿದರೂ ಬಲವಂತವಾಗಿ ಆಕೆಯನ್ನು ಮೆರವಣಿಗೆಯ ಮಧ್ಯಕ್ಕೆ ಎಳೆದೊಯ್ದು ಡ್ಯಾನ್ಸ್ ಮಾಡಿಸಿದ್ದಾರೆ.

ಇದೇ ಸಮಯದಲ್ಲಿ ಸ್ಥಳದಲ್ಲಿದ್ದ ಆರೋಪಿಯು ಹೆಂಡತಿ ಡ್ಯಾನ್ಸ್ ಮಾಡುದನ್ನು ಕಂಡು ಕೋಪಗೊಂಡಿದ್ದನು. ನಂತರ ಗೆಳೆಯರೊಂದಿಗೆ ಮದ್ಯ ಸೇವಿಸಿದ್ದಾನೆ.

ಮದುವೆ ಸಮಾರಂಭದ ಮುಗಿಸಿ ದಂಪತಿಗಳು ಮನೆಗೆ ತೆರಳಿದ್ದು ಇದೇ ವಿಷಯಕ್ಕೆ ಇವರ ನಡುವೆ ಮಾರಾಮಾರಿ ನಡೆದಿದೆ. ಈ ಸಂದರ್ಭದಲ್ಲಿ ಕೊಪಗೊಂಡ ಆರೋಪಿ ರಾಮ್, ಹಾರೆ ಮತ್ತು ಕೋಲಿನಿಂದ ಹಲ್ಲೆ ಮಾಡಿದ್ದಾನೆ. ಹಲ್ಲೆಯ ತೀವ್ರತೆಗೆ ಗಂಭೀರ ಗಾಯಗೊಂಡ ಮಹಿಳೆ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾಳೆ.

ವಿಷಯ ತಿಳಿಯುತ್ತಿದ್ದಂತೆ ಅಕ್ಕಪಕ್ಕದವರು ಸ್ಥಳಕ್ಕೆ ಧಾವಿಸಿ ನೋಡಿದಾಗ ಶರ್ಮಿಳಾ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು ತಕ್ಷಣ ಪೊಲೀಸರ ತಂಡ ಸ್ಥಳಕ್ಕೆ ಆಗಮಿಸಿ ಮಹಿಳೆಯ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಸೊರೊ ಉಪವಿಭಾಗೀಯ ಪೊಲೀಸ್ ಅಧಿಕಾರಿ ರಿತೇಶ್ ಕುಮಾರ್ ಮಹಾಪಾತ್ರ ತಿಳಿಸಿದ್ದಾರೆ. ಮೃತರ ಪೋಷಕರ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ಬಂಧಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/D73015iu7jn2glm2MECosd

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

 

ಇತ್ತೀಚಿನ ಸುದ್ದಿ

Exit mobile version