ರಷ್ಯಾ ಉಕ್ರೇನ್ ಯುದ್ಧ: ಏಜೆಂಟರಿಂದ ವಂಚನೆಗೊಳಗಾಗಿ ಸೈನ್ಯ ಸೇರಿದ್ದ ಹೈದ್ರಾಬಾದ್ ಯುವಕ ಸಾವು

06/03/2024

ರಷ್ಯಾದಲ್ಲಿ ಜಾಬ್ ಏಜೆಂಟರಿಂದ ಆಮಿಷಕ್ಕೊಳಗಾಗಿದ್ದ ಹೈದರಾಬಾದ್ ವ್ಯಕ್ತಿ ರಷ್ಯಾದ ಸೈನ್ಯಕ್ಕೆ ನೇಮಕಗೊಂಡು ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಸಾವನ್ನಪ್ಪಿದ್ದಾನೆ ಎಂದು ಅವರ ಕುಟುಂಬ ಬುಧವಾರ ತಿಳಿಸಿದೆ. ಏಜೆಂಟರ ವಂಚನೆಗೆ ಬಲಿಯಾದ 21 ಮಂದಿ ಭಾರತೀಯರಲ್ಲಿ ಮೊಹಮ್ಮದ್ ಅಸ್ಫಾನ್ ಕೂಡ ಕೊಲ್ಲಲ್ಪಟ್ಟಿದ್ದಾನೆ ಎಂದು ರಷ್ಯಾದಲ್ಲಿನ ಭಾರತೀಯ ರಾಯಭಾರ ಕಚೇರಿ ದೃಢಪಡಿಸಿದೆ.

ದುಬೈ, ದೆಹಲಿ ಮತ್ತು ಮುಂಬೈನಲ್ಲಿ ಕಚೇರಿಗಳನ್ನು ಹೊಂದಿರುವ ಬಾಬಾ ಬ್ಲಾಕ್ಸ್ ಕಂಪನಿಗೆ ತಲಾ 3 ಲಕ್ಷ ರೂ.ಗಳನ್ನು ಪಾವತಿಸಿದ್ದೇವೆ. 2023 ರ ನವೆಂಬರ್ 13 ರಂದು ರಷ್ಯಾದಲ್ಲಿ ಒಪ್ಪಂದಕ್ಕೆ ಸಹಿ ಹಾಕಿದ್ದೇವೆ ಎಂದು ಅವರ ಸಹೋದರ ಇಮ್ರಾನ್ ಹೇಳಿದ್ದಾರೆ. ಸೇನಾ ಸಹಾಯಕರಾಗಿ ಭರವಸೆ ನೀಡಿದ ಕೆಲಸವನ್ನು ಪಡೆಯುವ ಬದಲು, ಅವರನ್ನು ಯುದ್ಧದ ಮುಂಚೂಣಿಗೆ ಕಳುಹಿಸಲಾಯಿತು ಎಂದು ಆರೋಪಿಸಲಾಗಿದೆ.

ಅಸ್ಫಾನ್ ಅವರ ದುರಂತ ಸಾವಿನ ವಿಚಾರ ತಿಳಿದಿದೆ. ಅವರ ಕುಟುಂಬ ಮತ್ತು ರಷ್ಯಾದ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ರಷ್ಯಾದಲ್ಲಿನ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ. ಅವರ ಪಾರ್ಥಿವ ಶರೀರವನ್ನು ಭಾರತಕ್ಕೆ ಕಳುಹಿಸಲು ಪ್ರಯತ್ನಿಸುವುದಾಗಿ ರಾಯಭಾರ ಕಚೇರಿ ತಿಳಿಸಿದೆ.

ರಾಯಭಾರ ಕಚೇರಿ ಎಕ್ಸ್‌ನಲ್ಲಿ ಈ ರೀತಿ ಪೋಸ್ಟ್ ಮಾಡಿದೆ: “ಭಾರತೀಯ ಪ್ರಜೆಯಾದ ಮೊಹಮ್ಮದ್ ಅಸ್ಫಾನ್ ಅವರ ದುರಂತ ಸಾವಿನ ಬಗ್ಗೆ ಮಾಹಿತಿ ಬಂದಿದೆ. ನಾವು ಅವರ ಕುಟುಂಬ ಮತ್ತು ರಷ್ಯಾದ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ. ಅವರ ಪಾರ್ಥಿವ ಶರೀರವನ್ನು ಭಾರತಕ್ಕೆ ಕಳುಹಿಸಲು ಮಿಷನ್ ಪ್ರಯತ್ನಗಳನ್ನು ಮಾಡುತ್ತದೆ” ಎಂದು ಅವರು ಹೇಳಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version