12:48 PM Tuesday 27 - January 2026

ಐಎಎಸ್ ಪರೀಕ್ಷೆ ಪಾಸ್ ಮಾಡಿದ ಅಭ್ಯರ್ಥಿ ಕೊರೊನಾಕ್ಕೆ ಬಲಿ

pranjal prabhakar nakath
17/05/2021

ಹೈದರಾಬಾದ್: ಐಎಎಸ್ ಪರೀಕ್ಷೆ ಪಾಸ್ ಮಾಡಿದ್ದ ಯುವಕರೋರ್ವರು ಕೊರೊನಾ ಸೋಂಕಿಗೆ ಬಲಿಯಾದ ದಾರುಣ ಘಟನೆ ಹೈದರಾಬಾದ್ ನಿಂದ ವರದಿಯಾಗಿದ್ದು, ಜಿಲ್ಲಾಧಿಕಾರಿಯಾಗಬೇಕು ಎನ್ನುವ ಕನಸು ಸಾಕಾರಗೊಂಡ ಬೆನ್ನಲ್ಲೇ, ಕೊರೊನಾ ಪ್ರಾಣವನ್ನೇ ಕಿತ್ತುಕೊಂಡಿದೆ.

ಮಹಾರಾಷ್ಟ್ರದ ಅಕೋಲ ಜಿಲ್ಲೆಯ ಪಾತೂರ್ ತಾಲೂಕಿನ ತಾಂಡಲಿಯ ಸಣ್ಣ ಗ್ರಾಮದಲ್ಲಿ ಜನಿಸಿದ್ದ ಪ್ರಂಜಲ್ ಪ್ರಭಾಕರ್ ನಾಕತ್, ತಮ್ಮ ಐಎಎಸ್ ಅಧಿಕಾರಿಯಾಗುವ ಕನಸನ್ನು ಪೂರ್ಣಗೊಳಿಸಿದ್ದರು. ಜಿಲ್ಲಾಧಿಕಾರಿಯಾಗುವ ಕನಸು ನನಸಾದ ಬೆನ್ನಲ್ಲೇ ಅವರಿಗೆ ಕೊರೊನಾ ಪಾಸಿಟಿವ್  ಬಂದಿತ್ತು.

ಶ್ವಾಸಕೋಶಕ್ಕೆ ಕೊರೊನಾ ತಗುಲಿದ್ದು, ಪರಿಣಾಮವಾಗಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ತಕ್ಷಣ ಅವರನ್ನು ಏರ್ ಆಂಬುಲೆನ್ಸ್ ಮೂಲಕ ಹೈದರಾಬಾದ್ ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪೋಷಕರು ಹಾಗೂ ಕುಟುಂಬಸ್ಥರು ಪ್ರಂಜಲ್ ರನ್ನು ಉಳಿಸಿಕೊಳ್ಳಲು ಬಹಳ ಪ್ರಯತ್ನಿಸಿದರು. 55 ಲಕ್ಷ ರೂಪಾಯಿಗಳನ್ನು ಚಿಕಿತ್ಸೆಗಾಗಿ ವ್ಯಯ ಮಾಡಿದರೂ, ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ.

ಇತ್ತೀಚಿನ ಸುದ್ದಿ

Exit mobile version