10 ವರ್ಷ ಅಧಿಕಾರದಲ್ಲಿದ್ರೂ ಹಿಂದೂಗಳು ಅಪಾಯದಲ್ಲಿದ್ದಾರೆ ಅಂದ್ರೆ ಬಿಜೆಪಿ ಅಧಿಕಾರಕ್ಕೆ ಬರಬಾರದು: ಟಿಎಂಸಿ ನಾಯಕ ಕೀರ್ತಿ ಅಜಾದ್ ಹೇಳಿಕೆ

ಬಿಜೆಪಿ 10 ವರ್ಷಗಳ ಕಾಲ ಅಧಿಕಾರದಲ್ಲಿದ್ದರೂ ಹಿಂದೂಗಳು ಅಪಾಯದಲ್ಲಿದ್ದಾರೆ ಎಂದಾದರೆ ಆ ಪಕ್ಷ ಮರಳಿ ಅಧಿಕಾರಕ್ಕೆ ಬರಬಾರದು ಎಂದು ಮಾಜಿ ಕ್ರಿಕೆಟಿಗ ಮತ್ತು ಟಿಎಂಸಿ ನಾಯಕ ಕೀರ್ತಿ ಅಜಾದ್ ಹೇಳಿದ್ದಾರೆ. ಪಶ್ಚಿಮ ಬಂಗಾಳದಿಂದ ಟಿಎಂಸಿ ಅಭ್ಯರ್ಥಿಯಾಗಿ ಅವರು ಲೋಕಸಭೆಗೆ ಸ್ಪರ್ಧಿಸುತ್ತಿದ್ದಾರೆ.
ಮೊಘಲರ ಅವಧಿಯಲ್ಲಿ ಹಿಂದೂಗಳಿಗೆ ಅಪಾಯ ಇರಲಿಲ್ಲ. ಬ್ರಿಟಿಷ್ ಆಡಳಿತದಲ್ಲೂ ಇಂತಹ ಭಯ ಇರಲಿಲ್ಲ. ಸ್ವಾತಂತ್ರ ನಂತರ ಅಧಿಕಾರಕ್ಕೆ ಬಂದ ಸರಕಾರಗಳ ಅವಧಿಯಲ್ಲೂ ಹೀಗೆ ಆಗಿರಲಿಲ್ಲ. ಹಿಂದುಗಳಿಗೆ ಎಂದೂ ಅಪಾಯದ ಪರಿಸ್ಥಿತಿ ಎದುರಾಗಿಯೇ ಇಲ್ಲ. ಹಿಂದೂ ರಾಷ್ಟ್ರೀಯವಾದಿ ಪಕ್ಷ 10 ವರ್ಷದಿಂದ ಅಧಿಕಾರದಲ್ಲಿ ಇರುವಾಗ ದಿಢೀರನೆ ಹಿಂದುಗಳಿಗೆ ಅಪಾಯ ಎದುರಾದದ್ದು ಹೇಗೆ ಎಂದು ಕೀರ್ತಿ ಆಜಾದ್ ಪ್ರಶ್ನಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth