ಆದಿವಾಸಿಗಳ ಬಗ್ಗೆ ಅಪಮಾನಕಾರಿ ಹೇಳಿಕೆ: ಆಜ್ ತಕ್ ನ ನಿರೂಪಕ ಸುಧೀರ್ ಚೌಧರಿಗೆ ಆಯ್ತು ಅವಮಾನ..!

ಆದಿವಾಸಿಗಳು ಮತ್ತು ಜಾರ್ಖಂಡ್‌ನ ಮಾಜಿ ಸಿಎಂ ಹೇಮಂತ್ ಸೊರೇನ್ ಬಗ್ಗೆ ಅವಮಾನಕಾರಿಯಾಗಿ ಮಾತನಾಡಿದ್ದ ಆಜ್ ತಕ್ ನ ನಿರೂಪಕ ಸುಧೀರ್ ಚೌಧರಿ ಗೆ ಈಗ ಅವಮಾನವಾಗಿದೆ.
ಕಾರ್ಯಕ್ರಮ ಒಂದರಲ್ಲಿ ಭಾಷಣ ಮಾಡಲು ಕರೆದಿದ್ದ ಬೊಂಬೆ ನಿಮ್ಮ ಭಾಷಣದ ಅವಶ್ಯಕತೆ ಇಲ್ಲ ಎಂದು ಹೇಳಿದೆ. ಇ-ಸಮ್ಮಿಟ್ 2024 ರಲ್ಲಿ ರವಿವಾರ ಭಾಷಣ ನೀಡಲು ಐಐಟಿ-ಬಾಂಬೆ, ಸುಧೀರ್ ಚೌಧರಿಯನ್ನು ಆಹ್ವಾನಿಸಿತ್ತು. ವಿದ್ಯಾರ್ಥಿಗಳ ಆಕ್ಷೇಪದ ಹಿನ್ನೆಲೆಯಲ್ಲಿ ಅವರ ಭಾಷಣವನ್ನು ಸಂಸ್ಥೆ ರದ್ದುಗೊಳಿಸಿದೆ.
ಕಳೆದ ಶನಿವಾರ ಆರಂಭಗೊಂಡ ಈ ಕಾರ್ಯಕ್ರಮವನ್ನು ವಿದ್ಯಾರ್ಥಿ ಸಂಘಟನೆ ಇ-ಸೆಲ್ ಆಯೋಜಿಸಿತ್ತು. ಆದರೆ ಕಾರ್ಯಕ್ರಮದ ಭಾಷಣಕಾರರ ಕುರಿತ ಅಂತಿಮ ನಿರ್ಧಾರವನ್ನು ಸಂಸ್ಥೆಯ ಆಡಳಿತ ತೆಗೆದುಕೊಳ್ಳುತ್ತದೆ.
ಚೌಧರಿ ಈ ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮ ಮತ್ತು ಉದ್ಯಮಶೀಲತೆಯ ಕುರಿತು ಮಾತನಾಡಬೇಕಿತ್ತು.
ಜನವರಿ 31ರ ತಮ್ಮ ಪ್ರೈಮ್ ಟೈಮ್ ಶೋ “ಬ್ಲ್ಯಾಕ್ ಎಂಡ್ ವೈಟ್”ನಲ್ಲಿ ಈ.ಡಿ.ಯಿಂದ ಬಂಧಿತ ಹೇಮಂತ್ ಸೊರೇನ್, ಅದಿವಾಸಿ ಯಾಗಿ 20, 30, 40 ವರ್ಷಗಳ ಹಿಂದಿನಂತೆ ಮತ್ತೆ ಕಾಡಿನಲ್ಲಿ ವಾಸಿಸಬೇಕಾಗುತ್ತದೆ ಎಂದು ಹೇಳಿದ್ದರು. ಸುಧೀರ್ ಚೌದರಿಯ ಈ ಹೇಳಿಕೆಯನ್ನು ಎಲ್ಲರೂ ವಿರೋಧಿಸುತ್ತಿದ್ದಾರೆ.