12:35 AM Wednesday 22 - October 2025

ಕ್ರೂರ: ಭಯಾನಕ ರೀತಿಯಲ್ಲಿ ಬಾಂಗ್ಲಾದೇಶದ ಸಂಸದನನ್ನು ಕೊಂದ ಕಿಲ್ಲರ್ಸ್..!

24/05/2024

ಕೋಲ್ಕತಾದಲ್ಲಿ ಹತ್ಯೆಗೀಡಾದ ಬಾಂಗ್ಲಾದೇಶದ ಸಂಸದ ಅನ್ವರುಲ್ ಅಜೀಮ್ ಅನ್ವರ್ ಅವರನ್ನು ಹತ್ಯೆ‌‌ ಮಾಡುವ ಮೊದಲು ಚರ್ಮ ಸುಲಿದು ಕತ್ತರಿಸಲಾಗಿತ್ತು ಎಂದು ಪಶ್ಚಿಮ ಬಂಗಾಳ ಅಪರಾಧ ತನಿಖಾ ಇಲಾಖೆ (ಸಿಐಡಿ) ಮೂಲಗಳು ಇಂಡಿಯಾ ಟುಡೇಗೆ ತಿಳಿಸಿವೆ. ಈ ಘಟನೆಗೆ ಸಂಬಂಧಿಸಿದಂತೆ ಸಿಐಡಿ ತಂಡವು ಒಬ್ಬ ಶಂಕಿತನನ್ನು ಬಂಧಿಸಿದ ನಂತರ ಅನ್ವರುಲ್ ಅನ್ವರ್ ಹತ್ಯೆಯ ಈ ಭಯಾನಕ ಮಾಹಿತಿ ಬಯಲಾಗಿದೆ.

ಶಂಕಿತ ಜಿಹಾದ್ ಹವ್ಲಾದಾರ್ ಬಾಂಗ್ಲಾದೇಶದ ಖುಲ್ನಾ ಜಿಲ್ಲೆಯ ಬಾರಕ್ಪುರದ ನಿವಾಸಿಯಾಗಿದ್ದು, ಮುಂಬೈನಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ ಎಂದು ಸಿಐಡಿ ಮೂಲಗಳು ತಿಳಿಸಿವೆ. ಪ್ರಮುಖ ಆರೋಪಿ ಬಾಂಗ್ಲಾದೇಶ ಮೂಲದ ಅಮೆರಿಕ ಪ್ರಜೆ ಮತ್ತು ಸಂಸದರ ಆಪ್ತ ಸ್ನೇಹಿತ ಅಖ್ತರುಝಮಾನ್ ಎರಡು ತಿಂಗಳ ಹಿಂದೆ ಮುಂಬೈನಿಂದ ಕೋಲ್ಕತ್ತಾಗೆ ಬಾಡಿಗೆಗೆ ಜಿಹಾದ್ ಹವ್ಲಾದಾರ್ ನನ್ನು ಕರೆತಂದಿದ್ದ ಎಂದು ಸಿಐಡಿ ಮೂಲಗಳು ತಿಳಿಸಿವೆ.

ಕೋಲ್ಕತಾ ವಿಮಾನ ನಿಲ್ದಾಣದ ಬಳಿಯ ಹೋಟೆಲ್‌ನಲ್ಲಿ ತಂಗಿದ್ದ ಹವ್ಲಾದಾರ್ ಗೆ ಬಾಂಗ್ಲಾದೇಶದ ಸಂಸದನನ್ನು ಕೊಲ್ಲಲು ಅಖ್ತರುಝಮಾನ್ ಖರ್ಚು ಮಾಡಿದ 5 ಕೋಟಿ ರೂ.ಗಳಲ್ಲಿ ಪಾಲನ್ನು ನೀಡಲಾಯಿತು ಎಂದು ಮೂಲಗಳು ತಿಳಿಸಿವೆ.

ವಿಚಾರಣೆಯ ಸಮಯದಲ್ಲಿ ಹವ್ಲಾದಾರ್ ಮತ್ತು ಇತರ ನಾಲ್ವರು ಬಾಂಗ್ಲಾದೇಶಿ ಪ್ರಜೆಗಳು ಕೋಲ್ಕತ್ತಾದ ನ್ಯೂ ಟೌನ್ ಪ್ರದೇಶದ ಫ್ಲ್ಯಾಟ್ ನಲ್ಲಿ ಸಂಸದರನ್ನು ಉಸಿರುಗಟ್ಟಿಸಿ ಕೊಂದಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ.
ಬಾಂಗ್ಲಾದೇಶದ ಸಂಸದ ಕೊನೆಯ ಬಾರಿಗೆ ಫ್ಲಾಟ್ ಪ್ರವೇಶಿಸುತ್ತಿರುವುದು ಕಂಡುಬಂದಿದೆ. ಫ್ಲ್ಯಾಟ್ ಅನ್ನು ಅದರ ಮಾಲೀಕ, ಅಬಕಾರಿ ಇಲಾಖೆ ಉದ್ಯೋಗಿ ಸಂಸದರ ಸ್ನೇಹಿತನಿಗೆ ಬಾಡಿಗೆಗೆ ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version