ಪರವಾನಿಗೆ ಇಲ್ಲದೇ ಗ್ಯಾಸ್‌ ಸಿಲಿಂಡರ್ ಅಕ್ರಮ ದಾಸ್ತಾನು: ಪೊಲೀಸರಿಂದ ದಾಳಿ

gas
20/08/2023

ಮಂಗಳೂರು ನಗರದ ಅಳಕೆ ನ್ಯೂಚಿತ್ರಾ ಮಸೀದಿ ಪಕ್ಕದಲ್ಲಿರುವ ಜನನಿಬಿಡ ವಸತಿ ಸಂಕೀರ್ಣದ ಬಳಿ ಮಂಗಳೂರು ಗ್ಯಾಸ್‌ ಲೈಟ್ ಅಂಡ್ ಸರ್ವೀಸ್ ಸೆಂಟರ್ ಅಂಗಡಿಯ ಪಕ್ಕದ ಸಣ್ಣ ಕೊಠಡಿಯಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಗ್ಯಾಸ್‌ ಸಿಲಿಂಡರ್‌ ಗಳನ್ನು ಅಕ್ರಮವಾಗಿ ದಾಸ್ತಾನು ಮಾಡಿರುವ ಬಗ್ಗೆ ತಿಳಿದು ಬಂದ ಮಾಹಿತಿಯಂತೆ ಪೊಲೀಸರು ದಾಳಿ ಮಾಡಿದ್ದಾರೆ.

ಇದೇ ವೇಳೆ ಅರ್ಧ ಗ್ಯಾಸ್ ತುಂಬಿದ 03 ಗೃಹ ಬಳಕೆಯ ಇಂಡೇನ್ ಮತ್ತು ಹೆಚ್.ಪಿ. ಗ್ಯಾಸ್ ಸಿಲಿಂಡರ್ ಗಳು ಸೇರಿದಂತೆ ಒಟ್ಟು 26 ವಿವಿಧ ಆಳತೆಯ ಗ್ಯಾಸ್ ಸಿಲಿಂಡರ್ ಗಳನ್ನು ಪತ್ತೆ ಹಚ್ಚಲಾಗಿದೆ.

ಶೇಖ್ ಅಶ್ರಫುದ್ದೀನ್ (ಪ್ರಾಯ 59 ವರ್ಷ) ಎಂಬುವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಬಗ್ಗೆ ಮಂಗಳೂರು ಪೂರ್ವ ಠಾಣೆಯಲ್ಲಿ ದೂರು ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಇತ್ತೀಚಿನ ಸುದ್ದಿ

Exit mobile version