1:55 PM Wednesday 17 - December 2025

ನಾನು ಸನಾತನ ಧರ್ಮದ ವಿರೋಧಿಯಲ್ಲ, ಅಸಮಾನತೆಯ ವಿರೋಧಿ: ಚಿತ್ರನಟ ಚೇತನ್

chethan
08/09/2023

ತುಮಕೂರು: ನಾನು ಸನಾತನ ಧರ್ಮದ ವಿರೋಧಿಯಲ್ಲ. ನಾನು ಸನಾತನ ಧರ್ಮದಲ್ಲಿನ ಅಸಮಾನತೆಯ ವಿರೋಧಿ. ಹಿಂದೂ, ಮುಸ್ಲಿಂ,  ಕ್ರಿಶ್ಚಿಯನ್ ಈ ಮೂರೂ ಧರ್ಮದಲ್ಲೂ ಅಸಮಾನತೆ ಇದೆ ಎಂದು ಚಿತ್ರನಟ ಚೇತನ್ ಹೇಳಿದ್ದಾರೆ.

ತುಮಕೂರಿನಲ್ಲಿ ನಡೆದ ಪತ್ರಿಕೆ ಘೋಷ್ಠಿಯಲ್ಲಿ ಮಾತನಾಡಿದ ಅವರು, ಮಾತನಾಡುವ ಹಕ್ಕು ಎಲ್ಲರಿಗೂ ಇದೆ. ಆದರೆ ಸನಾತನ ಧರ್ಮ ಅನ್ನೋದನ್ನು ಅವರು ಯಾವ ವ್ಯಾಪ್ತಿಯಲ್ಲಿ ಹೇಳಿದ್ದಾರೆ ಅನ್ನೋದನ್ನು ನೋಡಬೇಕು ಎಂದರು.

ಕೇಂದ್ರ ಸರ್ಕಾರ ತರಲು ಹೊರಟಿರುವ ಏಕರೂಪ ನಾಗರಿಕ ಸಂಹಿತೆಗೆ ನನ್ನ ಸಹಮತ ಇದೆ. ಅದು ಸಮ ಸಮಾಜದ ಸಿವಿಲ್ ಕೋಡ್ ಆಗಿರಬೇಕು ಎಂದರು.

ಕಮ್ಯೂನಿಸ್ಟ್‌ ರು ಅದನ್ನು ವಿರೋಧಿಸಬಹುದು. ಆದರೆ ಈ ವಿಚಾರದಲ್ಲಿ ನಮ್ಮ ಬೆಂಬಲ ಇದೆ. ಕಾಂಗ್ರೆಸ್ ನವರು ತಂದಿರುವ ಐದು ಗ್ಯಾರಂಟಿ ತೇಪೆ ಹೆಚ್ಚುವ ಕೆಲಸ ಎಂದರು.

ಅದನ್ನು ದೇವರಾಜ್ ಅರಸರ ಆಡಳಿತಕ್ಕೆ ಹೋಲಿಸಬೇಡಿ.ಎಸ್ಸಿ ಎಸ್ಟಿಗಳ ಅನುದಾನ ಗ್ಯಾರಂಟಿಗೆ ಬಳಸಿಕೊಂಡು ಮೋಸ ಮಾಡಿದ್ದಾರೆ

ಸಿದ್ದರಾಮಯ್ಯ ರೈತರ ಭೂಮಿಯನ್ನು ಮೈನಿಂಗೆ ಕೊಟ್ಟಿದ್ದಾರೆ. ಮೈನಿಂಗ್ ವಿರುದ್ದವೇ ಸಿದ್ದರಾಮಯ್ಯ ಪಾದಯಾತ್ರೆ ಮಾಡಿದ್ರು ಎಂದರು.

ಈ ರೀತಿ ಕಾಂಗ್ರೆಸ್ ಸರ್ಕಾರ ಅನೇಕ ವೈರುಧ್ಯಗಳಿಂದ ಕೂಡಿದ್ದು ಕಾಂಗ್ರೆಸ್ ಪಕ್ಷದ ನೀತಿ ನಿಲುವುಗಳನ್ನು ನಾನು ಒಪ್ಪುವುದಿಲ್ಲ ಎಂದು ತಿಳಿಸಿದರು.

ಇತ್ತೀಚಿನ ಸುದ್ದಿ

Exit mobile version