ಅಕ್ಟೋಬರ್ 3 ರಂದು ಮೈಸೂರು ದಸರಾ ಉದ್ಘಾಟನೆ: ಸಿಎಂ ಸಿದ್ದರಾಮಯ್ಯ ಮಾಹಿತಿ

ಬೆಂಗಳೂರು: ಅಕ್ಟೋಬರ್ 3 ರಂದು ಮೈಸೂರು ದಸರಾ ಉದ್ಘಾಟನೆಯಾಗಲಿದ್ದು, ಅ.12 ರಂದು ಜಂಬೂಸವಾರಿಗೆ ನಡೆಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಮೈಸೂರು ದಸರಾ 2024 ಉನ್ನತ ಮಟ್ಟದ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದಸರಾ ಸಂಬಂಧ ಪ್ರತಿಕ್ರಿಯೆ ನೀಡಿದರು.
ದಸರ ಉದ್ಘಾಟನೆ ಯಾರಿಂದ ಮಾಡಿಸಬೇಕು ಎಂಬ ನಿರ್ಧಾರ ಕೈಗೊಳ್ಳಲು ಸಭೆ ನನಗೆ ಸರ್ವಾನುಮತದಿಂದ ಅನುಮತಿ ನೀಡಿದೆ. ಮೂರುನಾಲ್ಕು ದಿನಗಳಲ್ಲಿ ಯಾರು ಅಂತ ಘೋಷಣೆ ಮಾಡುವುದಾಗಿ ಇದೇ ವೇಳೆ ಅವರು ತಿಳಿಸಿದರು.
ದಸರಾ ಉದ್ಘಾಟನೆ ದಿನದಿಂದಲೇ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಾರಂಭ ಆಗಲಿವೆ. ದೀಪಾಲಂಕಾರ, ಕುಸ್ತಿ, ಯುವ ಸಂಭ್ರಮ, ಯುವ ದಸರಾ, ಕ್ರೀಡೆಗಳು ಅಂದೇ ಪ್ರಾರಂಭ ಆಗಲಿದೆ. ದಸರಾ ಉದ್ಘಾಟನೆ ಆದ ದಿನವೇ ವಸ್ತುಪ್ರದರ್ಶನ ಉದ್ಘಾಟನೆ ಆಗಬೇಕು, ಖಾಲಿ ಮಳಿಗೆಗಳು ಇರಬಾರದು, ವಸ್ತುಪ್ರದರ್ಶನದಲ್ಲಿ ಸರ್ಕಾರದ ಸಾಧನೆಗಳ ಪ್ರದರ್ಶನ ಮಾಡಬೇಕು ಅಂತಾ ಸೂಚನೆ ನೀಡಲಾಗಿದೆ ಎಂದು ಸಿಎಂ ವಿವರಿಸಿದರು.
ಜಂಬೂಸವಾರಿ ಮುಗಿದ ಬಳಿಕವೂ 11 ದಿನ ದೀಪಾಲಂಕಾರ ಇರಲಿದೆ. ಕಳೆದ ವರ್ಷಕ್ಕಿಂತ ಹೆಚ್ಚು ಅಲಂಕಾರವಾಗಿ ಇರಬೇಕು ಅಂತಾ ಸೂಚನೆ ನೀಡಲಾಗಿದೆ. ಇಂಧನ ಇಲಾಖೆಗೆ ಜವಾಬ್ದಾರಿ ನೀಡಲಾಗಿದೆ ಎಂದು ಸಿಎಂ ಇದೇ ವೇಳೆ ತಿಳಿಸಿದರು.
ದಸರಾ ಎಷ್ಟು ಹಣ ಬೇಕೋ ಅಷ್ಟು ಕೊಡ್ತೀವಿ. ವಿಜೃಂಭಣೆಯಿಂದ ಆಚರಣೆಗೆ ಎಷ್ಟು ಹಣ ಬೇಕೋ ಅಷ್ಟು ಕೊಡ್ತೀವಿ. ಗೋಲ್ಡ್ ಕಾರ್ಡ್ ದುರುಪಯೋಗ ಆಗದಂತೆ ನಾವು ಈ ಬಾರಿ ಕ್ರಮವಹಿಸುತ್ತೇವೆ. ಸಚಿವ ಮಹದೇವಪ್ಪಗೆ ಈ ಬಗ್ಗೆ ಸೂಚನೆ ನೀಡಿರುವುದಾಗಿ ಅವರು ತಿಳಿಸಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/JItjEWZ9e5fBWDL6CkTr97