ಕುದ್ಲುರು (ಆತೂರು) ವಿನ ಮುಬಾರಕ್ ಜುಮಾ ಮಸ್ಜಿದ್ ನಲ್ಲಿ ಸ್ವಾತಂತ್ರ್ಯ ದಿನಾಚರಣೆ

athur
15/08/2023

ದಕ್ಷಿಣ ಕನ್ನಡ ಜಿಲ್ಲೆಯ ಕುದ್ಲುರು (ಆತೂರು) ವಿನ ಮುಬಾರಕ್ ಜುಮಾ ಮಸ್ಜಿದ್ ನಲ್ಲಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ನಡೆಯಿತು.

ಆರಂಭದಲ್ಲಿ ಹಯಾತುಲ್ ಇಸ್ಲಾಂ ಮದ್ರಸದ ಅಧ್ಯಾಪಕ ಜಿಕೆ ಅಬೂಬಕ್ಕರ್ ಮದನಿ ಗಡಿಯಾರ್ ಪ್ರಾರ್ಥನೆ ಮಾಡಿ ಸಂದೇಶ ಭಾಷಣ ಮಾಡಿದರು.

ಮಸೀದಿ‌ ಖತೀಬ್ ಮುಹಮ್ಮದ್ ಮುನೀರ್ ಯಮಾನಿ ನೇತೃತ್ವದಲ್ಲಿ ಧ್ವಜಾರೋಹಣ ಕಾರ್ಯಕ್ರಮವನ್ನು ಮುಬಾರಕ್ ಮಸೀದಿ ಅಧ್ಯಕ್ಷ ಕೆ.ವೈ.ಇಸ್ಮಾಯಿಲ್, ಮಾಜಿ ಅಧ್ಯಕ್ಷ ಅಬ್ದುರ್ರಹ್ಮಾನ್ ಹಾಜಿ ಮರ್ವೆಲ್ ನಡೆಸಿಕೊಟ್ಟರು.

ಇದೇ ವೇಳೆ ಮಸೀದಿಯ ಖಜಾಂಜಿ ಬಿಕೆ ಅಬ್ದುಲ್ ಖಾದರ್ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಅಹ್ಮದ್ ಕುಂ‌‍ ಹಾಜಿ, ಎಸ್ ಕೆ ಎಸ್ ಎಸ್ ಎಫ್ ಕುದ್ಲುರು ಅಧ್ಯಕ್ಷ ಅಬ್ದುಲ್ ಖಾದರ್ ಮರ್ವೆಲ್, ಕೋಶಾಧಿಕಾರಿ ಡಿಕೆ ಅಬ್ದುಲ್ ರಝಾಕ್, ಎಸ್ ಕೆ ಎಸ್ ಎಸ್ ಎಫ್ ಕುಂಡಾಜೆ ಕ್ಲಸರ್ ಅಧ್ಯಕ್ಷ  ಮುಹಮ್ಮದ್ ಅಶ್ರಫ್, ಕುದ್ಲುರು ವಿಖಾಯ ಕನ್ವೀನರ್ ಹಸೈನಾರ್ ಎಂ.ಎಸ್. ಉಪಸ್ಥಿತರಿದ್ದರು.  ಮದ್ರಸಾದಲ್ಲಿ ನಡೆದ ಸ್ಪರ್ಧಾ ಕಾರ್ಯಕ್ರಮದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ಖತೀಬ್ ಮುಹಮ್ಮದ್ ಮುನೀರ್ ಯಮಾನಿ ಧನ್ಯವಾದಗೈದರು. ಕೊನೆಗೆ ಸಿಹಿತಿಂಡಿ ವಿತರಿಸಲಾಯಿತು.

ಇತ್ತೀಚಿನ ಸುದ್ದಿ

Exit mobile version