10:14 AM Saturday 23 - August 2025

ಕೊಹ್ಲಿ ಶತಕದಾಟ: ಬಾಂಗ್ಲಾದೇಶ ವಿರುದ್ಧ ಭಾರತ ತಂಡಕ್ಕೆ 7 ವಿಕೆಟ್ ಗಳ ಜಯ

19/10/2023

ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಕ್ರಿಕೆಟ್ ತಂಡವು ಇಂದು ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ 7 ವಿಕೆಟ್ ಗಳಿಂದ ಜಯ ಗಳಿಸಿದೆ.

ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯಷನ್ ಕ್ರೀಡಾಂಗಣದಲ್ಲಿ ನಡೆದ ಇಂದಿನ ಪಂದ್ಯದಲ್ಲಿ ಬಾಂಗ್ಲಾದೇಶ ನೀಡಿದ 257 ರನ್ ಗಳ ಸವಾಲಿನ ಗುರಿಯನ್ನು ಬೆನ್ನಟ್ಟಿದ ಭಾರತ ತಂಡವು 41.3 ಓವರ್ ನಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು 261 ರನ್ ಗಳಿಸಿ 7 ವಿಕೆಟ್ ಗಳ ಅಂತರದ ಭರ್ಜರಿ ಜಯ ಗಳಿಸಿತು. ಭಾರತದ ಪರ ರೋಹಿತ್ ಶರ್ಮಾ 48 ರನ್ ಗಳಿಸಿ ಕೇವಲ 2 ರನ್ ಗಳ ಅಂತರದಲ್ಲಿ ಅರ್ಧಶತಕ ವಂಚಿತರಾದರು. ಶುಭ್ ಮನ್ ಗಿಲ್ 53 ರನ್ ಗಳಿಸಿ ಹಸನ್ ಮಿರಾಜ್ ಗೆ ವಿಕೆಟ್ ಒಪ್ಪಿಸಿದರು.

ಬಳಿಕ ಕ್ರೀಸ್ ಗೆ ಬಂದ ಶ್ರೇಯಸ್ ಅಯ್ಯರ್ 19 ರನ್ ಗಳಿಸಿ ಔಟಾದರು. ಕೊಹ್ಲಿ ಅಜೇಯ 103 ರನ್ ಗಳಿಸಿದರು. ಕೆಎಲ್ ರಾಹುಲ್ ಅಜೇಯ 34 ರನ್ ಗಳಿಸಿದರು. ಆ ಮೂಲಕ ಬಾಂಗ್ಲಾದೇಶ ವಿರುದ್ಧ 7 ವಿಕೆಟ್ ಗಳ ಅಂತರದ ಭರ್ಜರಿ ಜಯಗಳಿಸಿತು.

ಅರ್ಧಶತಕ ಸಿಡಿಸಿದ್ದ ಕೊಹ್ಲಿ ಶತಕದತ್ತ ದಾಪುಗಾರಿಸಿದ್ದರು. ಒಂದು ಹಂತದಲ್ಲಿ ಕೊಹ್ಲಿ ಶತಕ ಸಿಡಿಸುವುದು ಅಸಾಧ್ಯ ಎಂದೇ ಊಹಿಸಲಾಗಿತ್ತು. ಆದರೆ ಅಂತಿಮ ಹಂತದಲ್ಲಿ ತಂಡ ಗೆಲ್ಲಲು 2ರನ್ ಗಳ ಅವಶ್ಯಕತೆ ಇದ್ದಾಗ ಕೊಹ್ಲಿಗೆ ಶತಕ ಸಿಡಿಸಲು 3ರನ್ ಗಳ ಅವಶ್ಯಕತೆ ಇತ್ತು. ಈ ಹಂತದಲ್ಲಿ ಭರ್ಜರಿ ಮ್ಯಾಜಿಕ್ ಮಾಡಿದ ಕೊಹ್ಲಿ ದೊಡ್ಡ ಎಸೆತಕ್ಕಾಗಿ ಕಾಯುತ್ತಿದ್ದರು.

ನಸುಮ್ ಅಹ್ಮದ್ ಎಸೆದ 42ನೇ ಓವರ್ ನ 3ನೇ ಎಸೆತದಲ್ಲಿ ಕೊಹ್ಲಿ ಭರ್ಜರಿ ಹೊಡೆತ ಭಾರಿಸಿ ಸಿಕ್ಸರ್ ಸಿಡಿಸಿ ತಂಡಕ್ಕೆ ಗೆಲುವು ತಂದು ಕೊಟ್ಟರು.

ಇತ್ತೀಚಿನ ಸುದ್ದಿ

Exit mobile version