3:35 PM Saturday 31 - January 2026

ತುರ್ತು ಲ್ಯಾಂಡಿಂಗ್: ದಿಢೀರನೇ ಭೋಪಾಲ್ ಬಳಿ ಬಂದಿಳಿದ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್

01/10/2023

ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಭಾನುವಾರ ಮಧ್ಯಪ್ರದೇಶದ ಭೋಪಾಲ್ ಬಳಿ ಮುನ್ನೆಚ್ಚರಿಕೆಯಾಗಿ ತುರ್ತು ಲ್ಯಾಂಡಿಂಗ್ ಮಾಡಿದೆ ಎಂದು ವಾಯುಪಡೆಯ ಮೂಲಗಳು ತಿಳಿಸಿವೆ. ಪ್ರಾಥಮಿಕ ವರದಿಗಳ ಪ್ರಕಾರ, ಎಎಲ್ಎಚ್ ಧ್ರುವ್ ತಾಂತ್ರಿಕ ದೋಷವನ್ನು ಕಂಡಿತು.

ಹೀಗಾಗಿ ತುರ್ತು ಲ್ಯಾಂಡಿಂಗ್ ಮಾಡಿವಂತಾಯಿತು. ಹೆಲಿಕಾಪ್ಟರ್ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಮತ್ತು ತಾಂತ್ರಿಕ ಸಮಸ್ಯೆಗಳನ್ನು ಪರಿಶೀಲಿಸಲು ತಜ್ಞರ ತಂಡವು ಸ್ಥಳ ತಲುಪಿದೆ.

ಐಎಎಫ್ ನ ಒಂದು ಎಎಲ್ಎಚ್ ಎಂಕೆ 3 ಹೆಲಿಕಾಪ್ಟರ್, ಭೋಪಾಲ್ ನಿಂದ ಚಕೇರಿಗೆ ತರಬೇತಿ ಕಾರ್ಯಾಚರಣೆಯಲ್ಲಿತ್ತು. ಭೋಪಾಲ್ ವಿಮಾನ ನಿಲ್ದಾಣದಿಂದ 50 ಕಿ.ಮೀ ದೂರದಲ್ಲಿರುವ ಡುಂಗರಿಯಾ ಅಣೆಕಟ್ಟಿನ ಬಳಿ ಸುರಕ್ಷಿತ ಮುನ್ನೆಚ್ಚರಿಕೆ ಲ್ಯಾಂಡಿಂಗ್ ನಡೆಸಿತು. ಘಟನೆಯಲ್ಲಿ ಯಾವುದೇ ಹಾನಿ ಅಥವಾ ಗಾಯಗಳ ಬಗ್ಗೆ ವರದಿಯಾಗಿಲ್ಲ. ಹೆಲಿಕಾಪ್ಟರ್ ಗೆ ತಾಂತ್ರಿಕ ನೆರವು ನೀಡಲಾಗುತ್ತಿದೆ ಎಂದು ಭಾರತೀಯ ವಾಯುಪಡೆ ಹೇಳಿಕೆಯಲ್ಲಿ ತಿಳಿಸಿದೆ.

ಹೆಲಿಕಾಪ್ಟರ್ ನಲ್ಲಿ ಆರು ಸೇನಾ ಸಿಬ್ಬಂದಿ ಇದ್ದರು. ಭೋಪಾಲ್ ನಿಂದ 60 ಕಿ.ಮೀ ದೂರದಲ್ಲಿರುವ ಬೆರಾಸಿಯಾದ ಹಳ್ಳಿಯಲ್ಲಿ ತುರ್ತು ಭೂಸ್ಪರ್ಶ ಮಾಡಲಾಯಿತು.

ಇತ್ತೀಚಿನ ಸುದ್ದಿ

Exit mobile version