11:12 PM Thursday 21 - August 2025

ಯುವತಿ ಮೇಲೆ ಅತ್ಯಾಚಾರ ಮಾಡಿ ಫೋಟೋ ತೆಗೆದ ಭಾರತೀಯ ವಿದ್ಯಾರ್ಥಿಗೆ 6 ವರ್ಷ ಜೈಲು

18/06/2023

ಕಳೆದ ಜೂನ್ ನಲ್ಲಿ ಲಂಡನ್ ನಲ್ಲಿ ಯುವತಿ ಮೇಲೆ ಅತ್ಯಾಚಾರ ಎಸಗಿದ 20 ವರ್ಷದ ಭಾರತೀಯ ವಿದ್ಯಾರ್ಥಿಗೆ ಆರೂವರೆ ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

ವರದಿಗಳ ಪ್ರಕಾರ, ಕಿಂಗ್ ಎಡ್ವರ್ಡ್ ಅವೆನ್ಯೂ ಮತ್ತು ನಾರ್ತ್ ರೋಡ್ ಉದ್ದಕ್ಕೂ ಪ್ರೀತ್ ವಿಕಾಲ್ ಎಂಬಾತ ಕುಡಿದ ಮತ್ತಿನಲ್ಲಿದ್ದ ಯುವತಿಯನ್ನು ತನ್ನ ತೋಳುಗಳಲ್ಲಿ ಹೊತ್ತುಕೊಂಡು ಹೋಗುವಾಗ ಕ್ಯಾಮೆರಾದಲ್ಲಿ ಸೆರೆಯಾಗಿದ್ದಾನೆ ಎಂದು ಸೌತ್ ವೇಲ್ಸ್ ಪೊಲೀಸರು ಸುದ್ದಿ ಸಂಸ್ಥೆ ಐಎಎನ್ಎಸ್ ಗೆ ತಿಳಿಸಿದ್ದಾರೆ.

ಅತ್ಯಾಚಾರ ಎಸಗಿದ ನಂತರ ಅಪರಾಧಿ ಆಕೆಯ ಖಾಸಗಿ ಚಿತ್ರಗಳನ್ನು ತೆಗೆದುಕೊಂಡಿದ್ದ ಎಂದು ವರದಿಯಾಗಿದೆ.

ಜೂನ್ 4, 2022 ರ ಮುಂಜಾನೆ ಯುವತಿಯನ್ನು ನಾರ್ತ್ ರೋಡ್ ಪ್ರದೇಶದ ಮನೆಗೆ ಕರೆದೊಯ್ದು ಅತ್ಯಾಚಾರ ಎಸಗಿದ ಆರೋಪದಡಿಯಲ್ಲಿ ಭಾರತೀಯ ವಿದ್ಯಾರ್ಥಿ ತಪ್ಪಿತಸ್ಥನೆಂದು ಸಾಬೀತಾಗಿದೆ. ಸ್ನೇಹಿತರೊಂದಿಗೆ ನೈಟ್  ಔಟ್ ನಲ್ಲಿದ್ದಾಗ ವಿಕಾಲ್ ಯುವತಿಯನ್ನು ಭೇಟಿಯಾಗಿದ್ದ. ಅವನು ತನ್ನ ಹಾಸಿಗೆಯ ಮೇಲೆ ಅವಳನ್ನು‌ ಮಲಗಿಸಿ ಫೋಟೋ ತೆಗೆದುಕೊಂಡಿದ್ದ ಎಂದು ದಿ ಸನ್ ವರದಿ ಮಾಡಿದೆ.

ಸಂತ್ರಸ್ತೆಗೆ ತಾನು ವಿಕಾಲ್ ಪಕ್ಕದಲ್ಲಿ ನಗ್ನವಾಗಿ ಇದ್ದದ್ದನ್ನು ನೆನಪಿಸಿಕೊಂಡಿದ್ದಾಳೆ. ಆದರೆ ತಾನು ಎಲ್ಲಿದ್ದೇನೆ ಅಥವಾ ತಾನು ಅತ್ಯಾಚಾರಕ್ಕೊಳಗಾಗಿದ್ದೇನೆ ಎಂದು ಅವಳಿಗೆ ತಿಳಿದಿರಲಿಲ್ಲ. ಅವಳು ಅದೇ ದಿನ ವಿಕಾಲ್ ವಿರುದ್ಧ ಪೊಲೀಸರಿಗೆ ದೂರು ನೀಡಿದ ನಂತರ ಅವನನ್ನು ಬಂಧಿಸಲಾಯಿತು. ತನಿಖೆ ನಡೆಸಿದ ಅಧಿಕಾರಿಗಳು ಸಿಸಿಟಿವಿಯನ್ನು ಪರಿಶೀಲಿಸಿ ಆರೋಪಿಯನ್ನು ಗುರುತಿಸಿ ಬಂಧಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version