ಐಪಿಎಲ್ ಬೆಟ್ಟಿಂಗ್ ದಂಧೆ ಪತ್ತೆ: ಇಬ್ಬರ ಬಂಧನ, 2.47 ಲಕ್ಷ ಹಣ ವಶ

ಉತ್ತರ ಪ್ರದೇಶದ ಹಾಪುರದಲ್ಲಿ ಐಪಿಎಲ್ ಬೆಟ್ಟಿಂಗ್ ಗ್ಯಾಂಗ್ ಅನ್ನು ಭೇದಿಸಿದ ಪೊಲೀಸರು ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 2.47 ಲಕ್ಷ ನಗದು, ಲ್ಯಾಪ್ಟಾಪ್ ಮತ್ತು ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅಜೀಮ್ ಮತ್ತು ಅರಾಫತ್ ಕ್ರಿಕೆಟ್ ಲೈವ್ ಗುರು ಅಪ್ಲಿಕೇಶನ್ ಅನ್ನು ಐಪಿಎಲ್ ಸ್ಕೋರ್ ಗಳನ್ನು ಟ್ರ್ಯಾಕ್ ಮಾಡಲು, ಗುರುತಿಸಲು ಮತ್ತು ನಡೆಯುತ್ತಿರುವ ಐಪಿಎಲ್ ಪಂದ್ಯಗಳ ಮೇಲೆ ಆನ್ ಲೈನ್ ನಲ್ಲಿ ಬೆಟ್ಟಿಂಗ್ ಮಾಡಲು ಜನರನ್ನು ತೊಡಗಿಸಿಕೊಳ್ಳಲು ಬಳಸಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಐಪಿಎಲ್ ಬೆಟ್ಟಿಂಗ್ ಗಾಗಿ ಹಿಮಾಂಶು, ಫುರ್ಕಾನ್, ದಾಸ್ ನಿಶು ಅಲಿಯಾಸ್ ನೀರಜ್ ಲಾಲ್, ಇಮ್ರಾನ್ ಅಲಿಯಾಸ್ ಇಮ್ಮು ಮತ್ತು ದೆಹಲಿ ನಿವಾಸಿ ನಿಕ್ಕು ಅವರೊಂದಿಗೆ ಕೆಲಸ ಮಾಡಿರುವುದಾಗಿ ವಿಚಾರಣೆಯ ಸಮಯದಲ್ಲಿ ಇವರಿಬ್ಬರು ಬಹಿರಂಗಪಡಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth