10:12 AM Wednesday 20 - August 2025

ಇಸ್ರೇಲ್ ದಾಳಿ: 33 ಒತ್ತೆಯಾಳುಗಳ ಸಾವು; ಹಮಾಸ್ ನಿಂದ ವೀಡಿಯೋ ರಿಲೀಸ್

03/12/2024

ಕಳೆದ 14 ತಿಂಗಳುಗಳಿಂದ ಇಸ್ರೇಲ್ ನಡೆಸುತ್ತಿರುವ ದಾಳಿಯಲ್ಲಿ 33 ಒತ್ತೆಯಾಳುಗಳು ಸಾವನ್ನಪ್ಪಿದ್ದಾರೆ ಎಂದು ಹಮಾಸ್ ಹೇಳಿಕೊಂಡಿದೆ. ಈ ಬಗ್ಗೆ ಹಮಾಸ್ ವಿಡಿಯೋ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಇದೇ ವೇಳೆ 2025 ಜನವರಿ 20ರಂದು ತಾನು ಅಧಿಕಾರ ವಹಿಸುವುದಕ್ಕಿಂತ ಮೊದಲು ಹಮಾಸ್ ತನ್ನ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸದಿದ್ದರೆ ಪರಿಣಾಮ ಘೋರವಾಗಿರುತ್ತದೆ ಎಂದು ಅಮೆರಿಕಾದ ಭಾವಿ ಅಧ್ಯಕ್ಷ ಟ್ರಂಪ್ ಹಮಾಸ್ ಗೆ ಎಚ್ಚರಿಕೆ ನೀಡಿದ್ದಾರೆ.

ಇಸ್ರೇಲ್ ಮತ್ತು ಹಮಾಸ್ ನಡುವೆ ಕದನ ವಿರಾಮ ಏರ್ಪಡಿಸುವುದಕ್ಕಾಗಿ ಈಜಿಪ್ಟ್ ಕತಾರ್ ಮತ್ತು ಅಮೆರಿಕಗಳು ಹೊಸದಾಗಿ ನಡೆಸುತ್ತಿರುವ ಸಂಧಾನ ಮಾತುಕತೆಯ ವೇಳೆ ಹಮಾಸ್ ಈ ಮಾಹಿತಿಯನ್ನು ಹಂಚಿಕೊಂಡಿದೆ.

ಮೃತಪಟ್ಟ ಒತ್ತೆಯಾಳುಗಳ ಪೈಕಿ ಕೆಲವರು ಇಸ್ರೇಲ್ ನ ವೈಮಾನಿಕ ದಾಳಿಗೆ ಸಿಲುಕಿ ಸಾವಿಗೀಡಾದರೆ ಇನ್ನೂ ಕೆಲವರು ಇಸ್ರೇಲ್ ಸೇನೆಯ ರಕ್ಷಣಾ ಕಾರ್ಯಾಚರಣೆಯ ವೇಳೆ ಸಾವಿಗೀಡಾಗಿದ್ದಾರೆ ಎಂದು ಹಮಾಸ್ ಹೇಳಿಕೊಂಡಿದೆ. ಹಾಗೆಯೇ ಇಸ್ರೇಲ್ ತನ್ನ ಈ ಹುಚ್ಚು ದಾಳಿಯನ್ನು ನಿಲ್ಲಿಸದಿದ್ದರೆ ಈಗಿರುವ ಒತ್ತೆಯಾಳುಗಳ ಸಾವಿನ ಹೊಣೆಯನ್ನು ಇಸ್ರೇಲ್ ವಹಿಸಿಕೊಳ್ಳಬೇಕಾಗುತ್ತದೆ ಎಂದು ಹಮಾಸ್ ಎಚ್ಚರಿಕೆ ನೀಡಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ

Exit mobile version