ಇಸ್ರೇಲ್-ಹಮಾಸ್ ಯುದ್ಧ: ಗಾಝಾದಲ್ಲಿ ‘ತಕ್ಷಣದ ಕದನ ವಿರಾಮ’ಕ್ಕೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮುಖ್ಯಸ್ಥರ ಕರೆ; ಯುದ್ಧದಲ್ಲಿ ಸತ್ತವರ ಸಂಖ್ಯೆ 6,400 ಕ್ಕೆ ಏರಿಕೆ

24/10/2023

ಇಸ್ರೇಲ್-ಹಮಾಸ್ ಯುದ್ಧವು ಮಂಗಳವಾರ 17 ನೇ ದಿನವನ್ನು ಪ್ರವೇಶಿಸುತ್ತಿದ್ದಂತೆ ಎರಡು ವಾರಗಳ ವಾಯು ದಾಳಿಯಿಂದ ಗಾಝಾದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಈಗ 5,000 ಮೀರಿದೆ ಎಂದು ಫೆಲೆಸ್ತೀನ್ ಆರೋಗ್ಯ ಸಚಿವಾಲಯ ವರದಿ ಮಾಡಿದೆ. ಇಸ್ರೇಲ್‌ನಲ್ಲಿ ಸಾವಿನ ಸಂಖ್ಯೆ 1400 ರಷ್ಟಿದ್ದು, ಅಕ್ಟೋಬರ್ 7 ರ ದಾಳಿಯಲ್ಲಿ 200 ಕ್ಕೂ ಹೆಚ್ಚು ಒತ್ತೆಯಾಳುಗಳನ್ನು ತೆಗೆದುಕೊಳ್ಳಲಾಗಿದೆ. ಒಟ್ಟು ಸಾವಿನ ಸಂಖ್ಯೆ ಈಗ 6,400 ಕ್ಕೆ ತಲುಪಿದೆ.

ಅಕ್ಟೋಬರ್ 7 ರಂದು ಯುದ್ಧ ಪ್ರಾರಂಭವಾದಾಗಿನಿಂದ ಸೆರೆಹಿಡಿದಿದ್ದ 200 ಕ್ಕೂ ಹೆಚ್ಚು ಒತ್ತೆಯಾಳುಗಳಲ್ಲಿ ಇಬ್ಬರು ಇಸ್ರೇಲಿ ಮಹಿಳೆಯರನ್ನು ಬಿಡುಗಡೆ ಮಾಡುವುದಾಗಿ ಹಮಾಸ್ ಸೋಮವಾರ ಘೋಷಿಸಿತ್ತು. ಈ ಮಹಿಳೆಯರು ಬಿಡುಗಡೆಗೊಂಡ ಮೂರನೇ ಮತ್ತು ನಾಲ್ಕನೇ ಒತ್ತೆಯಾಳುಗಳಾಗಿದ್ದರು.

ಏತನ್ಮಧ್ಯೆ, ಇಸ್ರೇಲ್ ಮಿಲಿಟರಿ ಸೋಮವಾರ ತಡರಾತ್ರಿ ಗಾಝಾ ನಿರಾಶ್ರಿತರ ಶಿಬಿರದಲ್ಲಿರುವ ಹಮಾಸ್ ಸೌಲಭ್ಯವನ್ನು ಗುರಿಯಾಗಿಸಿಕೊಂಡಿದೆ ಎಂದು ಫೆಲೆಸ್ತೀನ್ ಎನ್‌ಕ್ಲೇವ್ ನ ಆರೋಗ್ಯ ಸಚಿವಾಲಯ ದೃಢಪಡಿಸಿದೆ.
ಹಮಾಸ್ ಅನ್ನು ನಿರ್ಮೂಲನೆ ಮಾಡುವ ಗುರಿಯನ್ನು ಹೊಂದಿರುವ ‘ನಿರಂತರ ದಾಳಿಗಳನ್ನು’ ಮುಂದುವರಿಸುವ ಉದ್ದೇಶವನ್ನು ಇಸ್ರೇಲ್ ಮಿಲಿಟರಿ ಸ್ಪಷ್ಟಪಡಿಸಿದೆ.

ಜನನಿಬಿಡ ಗಾಝಾ ಪಟ್ಟಿಯ ಮೇಲಿನ ದಾಳಿಯನ್ನು ಕಡಿಮೆ ಮಾಡುವ ಯಾವುದೇ ಯೋಜನೆಯನ್ನು ಇಸ್ರೇಲ್ ಹೊಂದಿಲ್ಲ ಎಂದು ಸಿಬ್ಬಂದಿ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಹರ್ಜಿ ಹಲೇವಿ ಅವರ ಹೇಳಿಕೆ ಸೂಚಿಸಿದೆ.
ಇಸ್ರೇಲ್-ಫೆಲೆಸ್ತೀನ್ ಸಂಘರ್ಷದ ಕುರಿತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಮಾಸಿಕ ಸಭೆ ಇಂದು ನಿಗದಿಯಾಗಿದೆ. ಮಂತ್ರಿಗಳು ನ್ಯೂಯಾರ್ಕ್ ಗೆ ತೆರಳಿದ್ದಾರೆ. ಇಸ್ರೇಲ್ ನಲ್ಲಿ ಹಮಾಸ್ ದಾಳಿಗಳು, ನಾಗರಿಕರ ವಿರುದ್ಧದ ಹಿಂಸಾಚಾರ ಮತ್ತು ಇಸ್ರೇಲ್ನ ಆತ್ಮರಕ್ಷಣೆಯ ಹಕ್ಕನ್ನು ಪುನರುಚ್ಚರಿಸುವ ನಿರ್ಣಯವನ್ನು ಅಂಗೀಕರಿಸಲು ಯುಎಸ್ ಒತ್ತಾಯಿಸಿದೆ.

ಇತ್ತೀಚಿನ ಸುದ್ದಿ

Exit mobile version