ಮಸೀದಿಯನ್ನೇ ರೆಸ್ಟೋರೆಂಟ್ ಮಾಡಿದ ಇಸ್ರೇಲಿ ಸೈನಿಕರು: ಆಘಾತಕಾರಿ ವಿಚಾರ ಬಹಿರಂಗ

15/06/2024

ಗಾಝಾದ ರಫಾ ಗಡಿಭಾಗದಲ್ಲಿರುವ ಮಸೀದಿಯನ್ನು ಇಸ್ರೇಲಿ ಸೈನಿಕರು ರೆಸ್ಟೋರೆಂಟ್ ಆಗಿ ಮಾರ್ಪಡಿಸಿರುವ ಆಘಾತಕಾರಿ ಸುದ್ದಿ ಬಹಿರಂಗವಾಗಿದೆ. ಈ ಕುರಿತಾದ ವಿಡಿಯೋ ಬಿಡುಗಡೆಗೊಂಡಿದ್ದು ಜನರಿಂದ ಭಾರಿ ಆಕ್ರೋಶ ವ್ಯಕ್ತವಾಗಿದೆ.

ಗಾಝಾ ಮತ್ತು ಈಜಿಪ್ಟ್ ಗಡಿಯ ರಫಾ ದಲ್ಲಿ ಇರುವ ಮಸೀದಿಗೆ ಇಸ್ರೇಲ್ ಸೈನಿಕರು ಪ್ರವೇಶಿಸುವುದು ಮತ್ತು ಅಲ್ಲಿ ಅಡುಗೆ ತಯಾರಿಸುವುದು ವಿಡಿಯೋದಲ್ಲಿದೆ. ಹಲವು ಸೈನಿಕರು ಮಸೀದಿಯ ಒಳಗೆ ಇರುವುದು ಕೂಡ ವಿಡಿಯೋದಲ್ಲಿ ಗೊತ್ತಾಗುತ್ತದೆ. ಕೆಲವರು ಆಹಾರವನ್ನು ಪಡೆಯುತ್ತಿರುವುದು ಮತ್ತು ಇನ್ನು ಕೆಲವರು ಬಂದೂಕಿನೊಂದಿಗೆ ಅತ್ತಿತ್ತ ನಡೆದಾಡುತ್ತಿರುವುದು ಕೂಡ ವಿಡಿಯೋದಲ್ಲಿ ಸೆರೆಯಾಗಿದೆ.. ಈ ಪ್ರದೇಶದ ಬಹಳ ಪ್ರಮುಖ ಮಸೀದಿ ಇದು ಎಂದು ಹೇಳಲಾಗಿದೆ. ಇಸ್ರೇಲಿ ಸೈನಿಕರು ಪ್ರದೇಶವನ್ನು ಸುತ್ತುವರಿದ ಬಳಿಕ ನಾಗರಿಕರಿಗೆ ಮಸೀದಿಗೆ ಪ್ರವೇಶ ನಿಷೇಧಿಸಲಾಗಿದೆ. ಅಕ್ಟೋಬರ್ 7ರ ಬಳಿಕ ಕೇವಲಗಾಝದಲ್ಲೇ ನೂರಕ್ಕಿಂತಲೂ ಅಧಿಕ ಮಸೀದಿಗಳನ್ನು ಸೇನೆ ದ್ವಾಂಸ ಗೊಳಿಸಿದೆ ಎಂದು ವರದಿಯಾಗಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version