ಗಾಝಾದ ಮೇಲೆ ಇಸ್ರೇಲ್ ಕ್ರೌರ್ಯ: ಗಾಝಾ ಪರ ಸಿನೆಮಾ ತಾರೆಯರಿಂದ ಬೆಂಬಲ

29/05/2024

ಗಾಝಾದಲ್ಲಿ ಪುಟ್ಟ ಮಕ್ಕಳ ಸಹಿತ ಎಲ್ಲರನ್ನೂ ಹತ್ಯೆ ಮಾಡುತ್ತಿರುವ ಇಸ್ರೇಲ್ ನ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವ ಅಭಿಯಾನದಲ್ಲಿ ಸಿನಿಮಾ ತಾರೆಯರೂ ಸೇರಿಕೊಂಡಿದ್ದು ಪ್ರತಿಭಟನೆಗೆ ಭಾರೀ ಬಲ ಬಂದಿದೆ. ಎಲ್ಲಾ ಕಣ್ಣು ರಫಾದ ಕಡೆಗೆ ಅಥವಾ ಆಲ್ ಐಸ್ ಆನ್ ರಫಾ ಎಂಬ ಪೋಸ್ಟರಿನಲ್ಲಿ ಇನ್ಸ್ಟಾಗ್ರಾಮ್ ನಲ್ಲಿ ಈ ಕ್ಯಾಂಪೇನ್ ನಡೆಯುತ್ತಿದೆ. ತಾರೆಯರು ಈ ಗ ಗಾಝಾದ ಪರ ಧ್ವನಿ ಎತ್ತಿದ್ದಾರೆ.

ಖ್ಯಾತ ಸಿನಿಮಾ ತಾರೆಗಳಾದ ಆಲಿಯಾ ಭಟ್ ರಿಚ ಚಡ್ಡ, ಸ್ವರ ಭಾಸ್ಕರ್, ರಾಧಿಕಾ ಆಪ್ಟೆ,, ವರುಣ್ ಧವನ್, ಫಾತಿಮಾ ಸನ ಶೇಕ್,ಹನಿಸಿಂಗ್ ಸಮಂತ ಋತು ಪ್ರಭು ಮುಂತಾದವರು ಫೆಲೆಸ್ತೀನಿಯರ ಪರ ಧ್ವನಿಯೆತ್ತಿದ್ದಾರೆ.

ಮಕ್ಕಳ ಶಿರಚ್ಛೇದನ ಮಾಡುವ ನಿಮ್ಮ ದೇಶ ಈ ಜಗತ್ತಿಗೆ ಅಗತ್ಯ ಇಲ್ಲ ಎಂದು ನಟ ನಕುಲ್ ಮೇತ ಅಭಿಪ್ರಾಯ ಪಟ್ಟಿದ್ದಾರೆ. ಅಂತರಾಷ್ಟ್ರೀಯ ನ್ಯಾಯಾಲಯದ ವಿಧಿ ಬಂದ 48 ಗಂಟೆಗಳ ಬಳಿಕ ಇಸ್ರೇಲ್ ರಫಾಕ್ಕೆ 60 ಬಾರಿ ಬಾಂಬ್ ಹಾಕಿದೆ. ರಫಾದಲ್ಲಿ ಯು ಎನ್ ಹೆಚ್ ಸಿ ಆರ್ ಸ್ಕೂಲಲ್ಲಿ ಮಕ್ಕಳು ಆಶ್ರಯ ಪಡೆದಿದ್ದರು. ಆದರೆ ಅದರ ಮೇಲೂ ಇಸ್ರೇಲ್ ಬಾಂಬು ಹಾಕಿದೆ. ದೇಹದ ವಿವಿಧ ಅಂಗಗಳು ಛಿದ್ರಗೊಂಡ ಮಕ್ಕಳು ಕಂಡು ಬಂದಿದ್ದಾರೆ.ದೇಹದಲ್ಲಿ ಬೊಬ್ಬೆ ಎದ್ದ ಮಕ್ಕಳು ಕಂಡು ಬಂದಿದ್ದಾರೆ. ಇದು ಮನುಷ್ಯತ್ವಕ್ಕೆ ವಿರುದ್ಧವಾದ ಕ್ರೌರ್ಯವಾಗಿದೆ ಎಂದು ರಾಧಿಕಾ ಆಪ್ಟೆ ಬರೆದಿದ್ದಾರೆ.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

 

ಇತ್ತೀಚಿನ ಸುದ್ದಿ

Exit mobile version