ಗಾಝಾದ ಮೇಲೆ ಇಸ್ರೇಲ್ ದಾಳಿ: ಫೆಲೆಸ್ತೀನಿಯರ ಬದುಕು ಮತ್ತೆ ಅತಂತ್ರ

06/05/2024

ಗಾಝಾದ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಯಿಂದಾಗಿ ಫೆಲೆಸ್ತೀನಿಯರ ಬದುಕು ಮತ್ತು ಭಾವನೆಗಳು ಘಾಸಿಗೊಂಡಿವೆ. ಅವರ ಬದುಕನ್ನು ಸಂಪೂರ್ಣವಾಗಿ ಈ ದಾಳಿ ಕೆಡಿಸಿ ಬಿಟ್ಟಿದೆ. ಮುಖ್ಯವಾಗಿ ಆರೋಗ್ಯ ಕ್ಷೇತ್ರವನ್ನು ಈ ಯುದ್ಧ ತೀವ್ರವಾಗಿ ಬಾಧಿಸಿದೆ.. ಔಷಧಿಯೂ ಇಲ್ಲ ಡಯಾಲಿಸಿಸ್ಸೂ ಇಲ್ಲ ಎಂಬ ಅತ್ಯಂತ ದುರ್ಗಮ ಪರಿಸ್ಥಿತಿಗೆ ಕಾಯಿಲೆ ಪೀಡಿತರು ತಲುಪಿಬಿಟ್ಟಿದ್ದಾರೆ.

ಹೆಚ್ಚಿನ ಆಸ್ಪತ್ರೆಗಳು ಧ್ವಂಸುಗೊಂಡಿವೆ. ಇನ್ನುಳಿದ ಆಸ್ಪತ್ರೆಗಳಲ್ಲಿ ವಿದ್ಯುತ್ ಸೌಲಭ್ಯವಿಲ್ಲ. ಜನರೇಟರ್ ನ ವ್ಯವಸ್ಥೆ ಇಲ್ಲ. ಔಷಧೀಯ ಉಪಕರಣಗಳಿಲ್ಲ. ಮತ್ತು ಔಷಧಿಗಳು ಇಲ್ಲದ ಸ್ಥಿತಿ ಇದೆ. ಈ ಯುದ್ಧದಲ್ಲಿ ಗಾಯಗೊಂಡ ಸಾವಿರಾರು ಮಂದಿಗೆ ಚಿಕಿತ್ಸೆ ನೀಡುವುದಕ್ಕೆ ಪೂರಕವಾದ ಯಾವುದೂ ಇಲ್ಲದ ಸ್ಥಿತಿಯಿದೆ. ಹಾಗೆಯೇ ಯುದ್ದಕ್ಕಿಂತ ಮೊದಲೇ ವಿವಿಧ ರೋಗಗಳಿಂದ ಬಳಲುತ್ತಿರುವವರು ಔಷಧೀಯ ಕೊರತೆ ಮತ್ತು ಚಿಕಿತ್ಸೆಯ ಕೊರತೆಯಿಂದ ಮರಣದೆಡೆಗೆ ಮುಖ ಮಾಡಿದ್ದಾರೆ. ವಿಶೇಷವಾಗಿ ಕಿಡ್ನಿ ವೈಫಲ್ಯಕ್ಕೆ ಚಿಕಿತ್ಸೆ ಪಡೆಯುತ್ತಿರುವವರ ಸ್ಥಿತಿ ದಾರುಣವಾಗಿದೆ. ಡಯಾಲಿಸ್ ವ್ಯವಸ್ಥೆ ಸಂಪೂರ್ಣ ಕುಸಿದು ಹೋಗಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version