ಸಿಎಂ ಸಾಹೇಬ್ರೆ ಎಣ್ಣೆ ರೇಟು ಹೆಚ್ಚು ಮಾಡಿದ್ದು ಸರಿಯಲ್ಲ: ಯುವಕನಿಂದ ಸಿಎಂಗೆ ಮನವಿ

ಬೆಂಗಳೂರು: ರಾಜ್ಯಾದ್ಯಂತ ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ ಇಂದು ಚಾಲನೆ ಸಿಗಲಿದೆ ಅಲ್ಲಿ ಯುವಕನೊಬ್ಬ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮನವಿಯೊಂದನ್ನು ಮಾಡಿಕೊಂಡಿದ್ದಾನೆ.
ಮಹಿಳೆಯರಿಗೆ ಉಚಿತ ಬಸ್ ನೀಡಿದ್ದೀರಿ.ನಮಗೆ ಫ್ರೀ ಟಿಕೆಟ್ ಬೇಡ್ವೇ ಬೇಡ. ಆದರೆ ಸಿಎಂ ಸಾಹೇಬ್ರೆ ಎಣ್ಣೆ (ಮದ್ಯ) ರೇಟು ಹೆಚ್ಚು ಮಾಡಿದ್ದು ಸರಿಯಲ್ಲ. ಹೀಗಾಗಿ ದಯವಿಟ್ಟು ಎಣ್ಣೆ ರೇಟು ಇಳಿಸಿ ಎಂದು ಮನವಿ ಮಾಡಿಕೊಂಡಿದ್ದಾನೆ.
ಅಬಕಾರಿ ಇಲಾಖೆ ಸದ್ದಿಲ್ಲದೆ ಮದ್ಯ ಬೆಲೆ ಏರಿಕೆ ಮಾಡಿದೆ. ಸ್ಲಾಬ್‍ಗಳಲ್ಲಿ ಏರಿಕೆ ಮಾಡಲಾಗಿದ್ದು, ಬಿಯರ್‍ಗೆ 10 ರೂ. ಏರಿಕೆ ಮಾಡಲಾಗಿದೆ. ಹಾಗೂ ಹಾಟ್ ಡ್ರಿಂಕ್ಸ್ ಗಳ ವಿವಿಧ ಬ್ರ್ಯಾಂಡ್ ಗಳಿಗೆ ಬೇರೆ ಬೇರೆ ರೀತಿಯಾಗಿ ಬೆಲೆ ಏರಿಕೆ ಮಾಡಲಾಗಿದೆ.
ಯಾವೆಲ್ಲಾ ಬ್ರ್ಯಾಂಡ್ ಎಷ್ಟು ಬೆಲೆ ಏರಿಕೆ?:
650 ಎಂಎಲ್‍ನ ಬಿಯರ್ 160 ರಿಂದ 170 ರೂ. ಏರಿಕೆ ಮಾಡಲಾಗಿದೆ. ಮ್ಯಾಕ್ ಡ್ಯಾವೆಲ್ಸ್ 180 ಎಂಎಲ್ 198 ರಿಂದ 220 ರೂ.ಗೆ ಏರಿಕೆ, ಕಿಂಗ್ ಫಿಷರ್ 650 ಎಂಎಲ್‍ಗೆ 160 ರಿಂದ 170 ರೂ. ಏರಿಕೆ, ಟ್ಯೂಬರ್ಗ್ 160 ರಿಂದ 170 ರೂ.ಗೆ ಹೆಚ್ಚಳ, ಬಡ್ವೈಸರ್ 200 ರಿಂದ 220 ರೂ. ಹೆಚ್ಚಳ, ಪವರ್ ಕೂಲ್ 100 ರಿಂದ 110 ರೂ. ಏರಿಕೆ, ಬಕಾಡಿ 275 ಎಂಎಲ್‍ಗೆ 90 ರಿಂದ 105 ರೂ. ಏರಿಕೆ ಮಾಡಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw