ವರ್ತೂರು ಸಂತೋಷ್ ನ್ನು ‘ಕಿತ್ತೋದ್ ನನ್ ಮಗ’ ಎಂದ ಜಗ್ಗೇಶ್!

jaggesh vartur santosh
18/02/2024

ಹುಲಿ ಉಗುರಿನ ವಿಚಾರಕ್ಕೆ ಸಂಬಂಧಿಸಿದಂತೆ ಬಿಗ್ ಬಾಸ್ ಮನೆಯಿಂದ ವರ್ತೂರು ಸಂತೋಷ್ ಅವರನ್ನು ಪೊಲೀಸರು ಬಂಧಿಸಿದ ಬಳಿಕ ಸಾಕಷ್ಟು ಜನರು ಹುಲಿ ಉಗುರಿನ ವಿಚಾರಕ್ಕೆ ಕಾನೂನಿನ ಬಲೆಗೆ ಬಿದ್ದಿದ್ದರು. ಈ ಪೈಕಿ ಅತೀ ಹೆಚ್ಚು ಟ್ರೋಲ್ ಆಗಿದ್ದು, ನವರಸ ನಾಯಕ ಜಗ್ಗೇಶ್, ಈ ವಿಚಾರ ಆದಾಗಲೇ ಮುಗಿದು ಹೋಗಿದ್ದರೂ, ಇದೀಗ ಜಗ್ಗೇಶ್ ಅವರು ಈ ಬಗ್ಗೆ ನೀಡಿದ ಮತ್ತೊಂದು ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಕಿಡಿ ಹೊತ್ತಿಸಿದೆ.

ಹೌದು…! ಹಳ್ಳಿಕಾರ್ ತಳಿಯ ಬಗ್ಗೆ ಸಾಕಷ್ಟು ಪ್ರೀತಿ, ಅಭಿಮಾನ ವ್ಯಕ್ತಪಡಿಸುತ್ತಾ ಹೋರಾಟ ನಡೆಸುತ್ತಿರುವ ಬಿಗ್ ಬಾಸ್ ಸ್ಪರ್ಧಿಯಾಗಿದ್ದ  ವರ್ತೂರು ಸಂತೋಷ್ ಅವರ ಬಗ್ಗೆ ಜಗ್ಗೇಶ್ ಅವಹೇಳನಾಕಾರಿಯಾಗಿ ಮಾತನಾಡಿ ಇದೀಗ ಮತ್ತೆ ವಿವಾದಕ್ಕೆ ಸಿಲುಕಿದ್ದಾರೆ.

‘ರಂಗನಾಯಕ’ ಸಿನಿಮಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಗ್ಗೇಶ್,  ‘ಯಾವನೋ ಕಿತ್ತೋದ್ ನನ್ ಮಗ, ರಿಯಲ್ ಆಗಿ ಹುಲಿ ಉಗುರು ಹಾಕ್ಕೊಂಡು, ಯಾವುದೋ ಟಿವಿಯಲ್ಲಿ ತಗಲಾಕ್ಕೊಂಡ.. ಎಂದು ಘಟನೆಯ ಬಗ್ಗೆ ಮತ್ತೆ ಪ್ರಸ್ತಾಪಿಸಿದ್ದರು. ವರ್ತೂರು ಸಂತೋಷ್ ನ್ನು ಕಿತ್ತೋದ್ ನನ್ ಮಗ ಎಂದು ಹೇಳಿರುವ ಜಗ್ಗೇಶ್ ಅವರ ಮಾತಿಗೆ ವರ್ತೂರು ಸಂತೋಷ್ ಫ್ಯಾನ್ಸ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಕೆಲವರು ಜಗ್ಗೇಶ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಜಗ್ಗೇಶ್ ಹೇಳಿಕೆಗೆ ವರ್ತೂರು ಸಂತೋಷ್ ಕೂಡ ಪ್ರತಿಕ್ರಿಯೆ ನೀಡಿದ್ದು, ಬಿಡಣ್ಣ, ಅವರು ದೊಡ್ಡವರು. ನಾನು ಏನು ಹೇಳುತ್ತೇನೆ ಅಂದ್ರೆ, ಕಾಲಾಯ ತಸ್ಮೈ ನಮಃ ಅಷ್ಟೇ. ಕೆಲವೊಂದಕ್ಕೆ ಉತ್ತರ ಕೊಡಬೇಕು, ಇನ್ನೂ ಕೆಲವು ಮಾತುಗಳಿಗೆ ಸೈಲೆಂಟ್ ಆಗಿದ್ದರೆ ಸಾಕು. ಉತ್ತರ ಸಿಕ್ಕಿಬಿಡುತ್ತದೆ ಎಂದಿದ್ದಾರೆ.

ಸುದೀಪಣ್ಣನ ಹತ್ರ ಕೆಲವೊಂದನ್ನು ನಾನು ಕಲಿತಿದ್ದೇನೆ. ಸುದೀಪಣ್ಣ ಒಂದು ಮಾತು ಹೇಳ್ತಾರೆ, ವರ್ತೂರು ಅವ್ರೇ ಎಲ್ಲಾ ಟೈಮ್‌ ನಲ್ಲೂ ಮಾತನಾಡಬೇಕು ಅಂತೇನಿಲ್ಲ. ಕೆಲವು ಸಲ ಮಾತನಾಡದೇ ಸುಮ್ಮನಿದ್ರೆ ಸಾಕು, ಆ ಮೌನವೇ ಉತ್ತರ ನೀಡುತ್ತದೆ’ ಅಂತ. ಅಷ್ಟೇ ಸಾಕು ನನಗೆ. ತೂಕದ ಜೊತೆ ತೂಕವನ್ನು ಅಳೆಯಬೇಕಾದರೆ ತೂಕಕ್ಕೆ ತೂಕ ಸರಿ ಇರಬೇಕು ಎಂದು ಜಗ್ಗೇಶ್ ಗೆ ವರ್ತೂರು ಸಂತೋಷ್ ತಿರುಗೇಟು ನೀಡಿದ್ದಾರೆ.

ಇತ್ತೀಚಿನ ಸುದ್ದಿ

Exit mobile version