11:11 AM Saturday 23 - August 2025

ಜೈಲಿನಲ್ಲಿದ್ದು ಕೊಂಡೇ ಡೀಲ್:  ಮಹಿಳೆಗೆ ಜೈಲಿನಿಂದ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟ ಕೊಲೆ ಆರೋಪಿ

18/02/2021

ಬೆಳಗಾವಿ: ಜೈಲಿನಲ್ಲಿದ್ದು ಕೊಂಡೇ ಹಣಕ್ಕೆ ಧಮ್ಕಿ ಹಾಕಿರುವ ಘಟನೆ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ನಡೆದಿದ್ದು, ರೌಡಿಶೀಟರ್ ಇರ್ಫಾನ್ ಕೊಲೆ ಕೇಸ್ ನಲ್ಲಿ ಜೈಲಿನಲ್ಲಿರುವ  ತೌಸಿಫ್ ಎಂಬಾತ ಮಹಿಳೆಯೊಬ್ಬರಿಗೆ ಧಮ್ಕಿ ಹಾಕಿದ್ದಾನೆ.

ತನಗೆ ಬೇಲ್ ಕೊಡಿಸಲು ಹಣ ರೆಡಿ ಮಾಡು ಎಂದು 8792641107 ಮೊಬೈಲ್ ನಂಬರ್ ನಿಂದ ಆರೋಪಿಯು ಕರೆ ಮಾಡಿ ಬೆದರಿಕೆ ಹಾಕಿದ್ದಾನೆ. ಧಾರವಾಡದ ಶೆಟ್ಟರ್ ಕಾಲೊನಿ ನಿವಾಸಿ ಸ್ನೇಹ ದೇಸಾಯಿಗೆ ಧಮ್ಕಿ ಹಾಕಿದ ಆರೋಪಿ ತನ್ನ ಸಂಬಂಧಿಕರ ಮೂಲಕ 3 ಲಕ್ಷ ರೂ. ಹಣ ವಸೂಲಿ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ಸೇಹಾ ದೇಸಾಯಿ ಮತ್ತು ತೌಸಿಫ್ ಎಸೆಸೆಲ್ಸಿ ಸ್ನೇಹಿತರು. ಇವರ ನಡುವೆ ಹಣದ ವ್ಯವಹಾರ ಇತ್ತು ಎನ್ನಲಾಗಿದೆ.  ತನ್ನ ಉದ್ಯಮಕ್ಕೆ ತೌಸಿಫ್ ನಿಂದ ಬಡ್ಡಿಗೆ ಹಣಪಡೆದಿದ್ದರು. ಬಳಿಕ ಬಡ್ಡಿ ಸಹಿತ ಹಣ ಹಿಂದುರುಗಿಸಿದ್ದರು. ಆದರೆ ಇದೀಗ ಆರೋಪಿ ತೌಸಿಫ್ 65 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಹೀಗಾಗಿ ಸ್ನೇಹಾ ಹುಬ್ಬಳ್ಳಿಯ ಶಹರ ಠಾಆಣೆಯಲ್ಲಿ ತೌಸಿಫ್ ನಿಪ್ಪಾಣಿ ಮತ್ತು ತೌಸಿಫ್ ಸಹೋದರಿ ಹೀನಾ ಹಾಗೂ ಸಂಬಂಧಿ ವಿರುದ್ಧ ದೂರು ನೀಡಿದ್ದಾರೆ.

ಇತ್ತೀಚಿನ ಸುದ್ದಿ

Exit mobile version