ಜನವರಿ 21: ಟೀಮ್ ಸ್ವರ ಸೂರ್ಯ ಮೆಲೋಡಿಸ್ ವತಿಯಿಂದ ಅಂತರ್ ಜಿಲ್ಲಾ ಕಬಡ್ಡಿ ಪಂದ್ಯಾಟ

ಮೂಡುಬಿದಿರೆ: ಟೀಮ್ ಸ್ವರ ಸೂರ್ಯ ಹೊಸಂಗಡಿ ಇವರ ಪ್ರಾಯೋಜಕತ್ವದಲ್ಲಿ ಜನವರಿ 21ರಂದು 21ರ ವಯೋಮಾನದ ಅಂತರ್ ಜಿಲ್ಲಾ ಮ್ಯಾಟ್ ಕಬಡ್ಡಿ ಪಂದ್ಯಾಕೂಟವನ್ನು ವೇಣೂರ್ ಸಮೀಪದ ಹೊಸಂಗಡಿಯ ಪಜಂಬಾಡಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.
ಬಹುಮಾನಗಳು:
ಪ್ರಥಮ: 7,000 ರೂ.
ದ್ವಿತೀಯ: 5000 ರೂ.
ತೃತೀಯ: 2000 ರೂ.
ಚತುರ್ಥ: 2000 ರೂ.
ಬಹುಮಾನದ ಜೊತೆಗೆ ಸ್ವರ ಸೂರ್ಯ ಟ್ರೋಫಿ ನೀಡಿ ಗೌರವಿಸಲಾಗುವುದು. ಜೊತೆಗೆ ಉತ್ತಮ ಹಿಡಿತಗಾರ, ಉತ್ತಮ ದಾಳಿಗಾರ ಹಾಗೂ ಸವ್ಯಸಾಚಿ ಆಟಗಾರರಿಗೆ ವೈಯಕ್ತಿಕ ಪ್ರಶಸ್ತಿ ನೀಡಲಾಗುವುದು
ಜನವರಿ 20 ತಂಡಗಳ ಹೆಸರು ನೋಂದಣಿಗೆ ಕೊನೆಯ ದಿನಾಂಕವಾಗಿದೆ. ಎಲ್ಲ ಆಟಗಾರರು ಆಧಾರ್ ಕಾರ್ಡ್ ಅಥವಾ ಶಾಲಾ ಐಡಿ ಕಾರ್ಡ್ ಕಡ್ಡಾಯವಾಗಿ ತರಬೇಕು. ಫೇಕ್ ಆಧಾರ್ ಕಾರ್ಡ್ ಅಥವಾ ಐಡಿ ತಂದರೆ ಪಂದ್ಯಾಟದಿಂದ ಹೊರಗಿಡಲಾಗುವುದು. ಎಲ್ಲ ತಂಡಗಳು 10 ಗಂಟೆಯೊಳಗೆ ಹಾಜರಿರಬೇಕು ಮತ್ತು ತೀರ್ಪುಗಾರರು ಹಾಗೂ ಸಂಘಟಕರ ತೀರ್ಮಾನ ಅಂತಿಮವಾಗಿರುತ್ತದೆ. ಹೆಚ್ಚಿನ ಮಾಹಿತಿಗಳಿಗಾಗಿ 8971419047, 9108208150, 8296842203 ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.