12:32 AM Wednesday 20 - August 2025

ದೇಶದಲ್ಲಿ ಮೊದಲ ಬಾರಿಗೆ ವಿಧವಾ ಪುನರ್ ವಿವಾಹಕ್ಕೆ ಪ್ರೋತ್ಸಾಹ ಧನ ಜಾರಿಗೊಳಿಸಿದ ಜಾರ್ಖಂಡ್ ಸರ್ಕಾರ

Champai Soren
07/03/2024

ರಾಂಚಿ: ವಿಧವೆಯರು ಉತ್ತಮ ರೀತಿಯ ಜೀವನ ನಡೆಸಲು ಅನುಕೂಲವಾಗುವಂತೆ ಮಾಡಲು ಮರು ವಿವಾಹವನ್ನು ಉತ್ತೇಜಿಸುವ ಯೋಜನೆಗೆ ಜಾರ್ಖಂಡ್ ಮುಖ್ಯಮಂತ್ರಿ ಚಂಪೈ ಸೊರೇನ್ ನೇತೃತ್ವದ ಸರ್ಕಾರ ಮುಂದಾಗಿದೆ.

ದೇಶದಲ್ಲೇ ಮೊದಲ ಬಾರಿಗೆ ಪುನರ್ವಿವಾಹ ಪ್ರೋತ್ಸಾಹ ಯೋಜನೆ’ಯನ್ನು ಜಾರ್ಖಂಡ್ ಮುಖ್ಯಮಂತ್ರಿ ಚಂಪೈ ಸೊರೆನ್) ಪ್ರಾರಂಭಿಸಿದರು. ಈ ಯೋಜನೆಯಡಿಯಲ್ಲಿ ಗಂಡನ ಮರಣದ ನಂತರ ಮರು ಮದುವೆಯಾಗಲು ನಿರ್ಧರಿಸಿದ ಮಹಿಳೆಯರು ಸರಕಾರದಿಂದ 2 ಲಕ್ಷ ರೂ.ಗಳ ಪ್ರೋತ್ಸಾಹ ಧನ ಪಡೆಯಲಿದ್ದಾರೆ.

ಈ ಯೋಜನೆಗೆ ಕೆಲವು ಷರತ್ತುಗಳು ಅನ್ವಯವಾಗುತ್ತದೆ. ಈ ಯೋಜನೆಗೆ ಅರ್ಹತೆ ಹೊಂದಿದ ಮಹಿಳೆಯರು ಮದುವೆಯ ವಯಸ್ಸಿವರಾಗಿಬೇಕು. ಮತ್ತು ಸರ್ಕಾರಿ ಉದ್ಯೋಗಿ, ಪಿಂಚಣಿದಾರ ಅಥವಾ ಆದಾಯ ತೆರಿಗೆ ಪಾವತಿಸುವವರಿಗೆ ಈ ಯೋಜನೆ ಅನ್ವಯಿಸುವುದಿಲ್ಲ, ಈ ಯೋಜನೆಯ ಪ್ರಯೋಜನಗಳನ್ನು ಪಡೆಯಲು, ಫಲಾನುಭವಿಯು ಮರುಮದುವೆಯಾದ ದಿನಾಂಕದಿಂದ ಒಂದು ವರ್ಷದೊಳಗೆ ಅರ್ಜಿ ಸಲ್ಲಿಸಬೇಕು ಮತ್ತು ತನ್ನ ದಿವಂಗತ ಪತಿಯ ಮರಣ ಪ್ರಮಾಣಪತ್ರವನ್ನು ಸಲ್ಲಿಸಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಹಿಳೆಯರನ್ನು ಸಬಲೀಕರಣಗೊಳಿಸುವ ಸಲುವಾಗಿ, ವಿಧವೆ ಪುನರ್ವಿವಾಹ ಪ್ರೊತ್ಸಾಹನ್ ಯೋಜನೆ’ಯನ್ನು ಮುಖ್ಯಮಂತ್ರಿ ಚಂಪೈ ಸೊರೆನ್ ಅವರು ಬುಧವಾರ ಪ್ರಾರಂಭಿಸಿದರು, ಇದರ ಅಡಿಯಲ್ಲಿ ಮತ್ತೆ ಮದುವೆಯಾಗುವ ವಿಧವೆಯರಿಗೆ 2 ಲಕ್ಷ ರೂ. ಈ ಯೋಜನೆಯು ವಿಧವೆಯರ ಆತ್ಮ ವಿಶ್ವಾಸಕ್ಕೆ ಉತ್ತೇಜನ ನೀಡುತ್ತದೆ ಮತ್ತು ಮಹಿಳೆಯರ ಮರುವಿವಾಹದ ಬಗ್ಗೆ ಸಾಮಾಜಿಕ ಅಭಿಪ್ರಾಯವನ್ನು ಬದಲಾಯಿಸುತ್ತದೆ ಎಂದು ಕುಮಾರ್ ಅಭಿಪ್ರಾಯ ಪಟ್ಚಿದ್ದಾರೆ.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version