12:16 AM Thursday 21 - August 2025

ಕಬಡ್ಡಿ ಪಂದ್ಯಾವಳಿ: ಎಸ್.ಜಿ.ಧೃತಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ

sg dhruthi
06/09/2024

ಕೊಟ್ಟಿಗೆಹಾರ: ಬಣಕಲ್ ನಜರೆತ್  ಪ್ರೌಢಶಾಲೆಯ ವಿದ್ಯಾರ್ಥಿನಿ ಕುಮಾರಿ  ಎಸ್.ಜಿ.ಧೃತಿ ಕಬಡ್ಡಿ ಪಂದ್ಯಾವಳಿಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಪಂಜಾಬಿನಲ್ಲಿ ನಡೆಯುತ್ತಿರುವ 19ಹರೆಯದ ಬಾಲಕೀಯರ  ಸಿಐಎಸ್ ಸಿಇ  ರಾಷ್ಟ್ರ ಮಟ್ಟದ ಕಬಡ್ಡಿಯಲ್ಲಿ ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

ಇವರು ಮೂಡಿಗೆರೆ ತಾಲ್ಲೂಕಿನ ಬಾಸ್ತಿ ಗ್ರಾಮದ ಗಿರೀಶ್ ಹಾಗೂ ಅಶ್ವಿನಿ ದಂಪತಿಗಳ ಪುತ್ರಿ.ಇವರ ಸಾಧನೆಗೆ ಶಾಲೆಯ ಪ್ರಾಂಶುಪಾಲೆ ಸಿಸ್ಟರ್  ಹಿಲ್ಡಾ ಲೋಬೋ ಹಾಗೂ ಪೋಷಕರು, ಕ್ರೀಡಾಭಿಮಾನಿಗಳು ಹರ್ಷ ವ್ಯಕ್ತ ಪಡಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ

Exit mobile version