ರಾಷ್ಟ್ರಮಟ್ಟದ ಕಬಡ್ಡಿ ಆಟದಲ್ಲಿ ಚಿನ್ನ ಗೆದ್ದ ಏಕಲವ್ಯ ಮಾದರಿ ವಸತಿಶಾಲೆ ತರುವೇ ವಿದ್ಯಾರ್ಥಿಗಳು

kottigehara
30/12/2022

ಕೊಟ್ಟಿಗೆಹಾರ: ಏಕಲವ್ಯ ಮಾದರಿ ವಸತಿಶಾಲೆ ತರುವೆ, ಇಲ್ಲಿಯ ಮಕ್ಕಳು ಕಬಡ್ಡಿ ಆಟದಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಪಡೆದು ಚಿನ್ನವನ್ನು ಪಡೆಯುವುದರ ಮೂಲಕ ಚಿಕ್ಕಮಗಳೂರು ಜಿಲ್ಲೆಗೆ ಕೀರ್ತಿಯನ್ನು ತಂದಿದ್ದಾರೆ.

ಈ ತಿಂಗಳು ಈ ತಿಂಗಳ 17, 18, 19ರಂದು ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದಂತಹ ರಾಷ್ಟ್ರಮಟ್ಟದ ಏಕಲವ್ಯ ಮಾದರಿ ವಸತಿ ಶಾಲೆಗಳ ಕ್ರೀಡಾಕೂಟದಲ್ಲಿ ಎದುರಾಳಿ ತಂಡವಾದ ತೆಲಂಗಾಣವನ್ನು ಅತಿ ಹೆಚ್ಚು ಅಂಕಗಳಿಂದ ಸೋಲಿಸುವುದರ ಮೂಲಕ ಕರ್ನಾಟಕದಿಂದ ಪ್ರತಿನಿಧಿಯಾದ ತರುವೇ ಶಾಲೆಯ ಮಕ್ಕಳು ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಪಡೆಯುವುದರ ಮೂಲಕ ಚಿಕ್ಕಮಗಳೂರು ಜಿಲ್ಲೆಗೆ ಕೀರ್ತಿಯನ್ನು ತಂದಿರುತ್ತಾರೆ. ಈ ಸಾಧನೆಯನ್ನು ನಮ್ಮ ಏಕಲವ್ಯ ಶಾಲೆ ಮೂರನೇ ಬಾರಿ ಎಂದು ಪ್ರಭಾರ ಪ್ರಾಂಶುಪಾಲರು ತಿಳಿಸಿದ್ದಾರೆ.

ಶಾಲೆಯ ಮಕ್ಕಳಾದ ಅಂಕಿತ, ವಿಜಯದಶಮಿ, ವಿಜಯಲಕ್ಷ್ಮಿ , ಸುಕನ್ಯಾ , ಅರ್ಪಿತ , ಸ್ಪಂದನ , ಸಾನಿಕ ಮತ್ತು ಚಾಮರಾಜ ಜಿಲ್ಲೆಯ ಮಂಗಳ ಶಾಲೆಯ ಮೂರು ಮಕ್ಕಳು ಸೇರಿ ಈ ಗೆಲುವು ದಾಖಲಿಸಿದ್ದಾರೆ ಎಂದು ಶಾಲೆಯ ವಾರ್ಡನ್ ಕಲ್ಲೇಶರ, ಪ್ರಾಂಶುಪಾಲರದ ಅಕ್ಷತಾ ತಿಳಿಸಿದ್ದಾರೆ.
ಶಾಲೆಯಿಂದ ತರಬೇತಿದಾರರಾದಂತಹ ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರಸನ್ನ, ಸುಶ್ರೂಶಕಿಯಾದಂತಹ ಶೋಭಾ ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ಈ ಸಾಧನೆಯನ್ನು ಕುರಿತು ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ಬರುವ ಕ್ರೈಸ್ತ ಸಂಸ್ಥೆಯ ಎಲ್ಲಾ ಸಿಬ್ಬಂದಿ ವರ್ಗದವರು ಹರ್ಷವನ್ನು ವ್ಯಕ್ತಪಡಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

 

ಇತ್ತೀಚಿನ ಸುದ್ದಿ

Exit mobile version