3:57 AM Thursday 29 - January 2026

ಮಗು ಹಠ ಮಾಡುತ್ತಿದೆ ಎಂದು ಕಾದ ಸಟ್ಟುಗದಿಂದ ಬರೆ ಎಳೆದ ಪಾಪಿ ತಾಯಿ!

sullia navoor
17/08/2022

ಮಗು ಹಠ ಮಾಡುತ್ತಿದೆ ಎಂದು ಕೋಪಗೊಂಡ ತಾಯಿಯೋರ್ವಳು ಮಗುವಿಗೆ ಕಾದ ಸಟ್ಟುಗದಿಂದ ಬರೆ ಹಾಕಿದ್ದ ಘಟನೆ‌ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ನಾವೂರಿನಲ್ಲಿ ನಡೆದಿದೆ.

ನಾಲ್ಕು ವರ್ಷ ಐದು ತಿಂಗಳು ಪ್ರಾಯದ ಹೆಣ್ಣು ಮಗುವಿಗೆ ಸುಳ್ಯದ ಗಾಂಧಿನಗರ ನಾವೂರು ನಿವಾಸಿಯಾದ ಕಾವ್ಯಶ್ರೀ ಎಂಬ ಮಹಿಳೆ ಸಟ್ಟುಗದಿಂದ ಬರೆ ಎಳೆದಿದ್ದಾಳೆ.

ಈಕೆ ಮೊದಲ ಗಂಡನಿಂದ ವಿಚ್ಛೇದನ ಪಡೆದು ಮಂಜೇಶ್ವರ ನಿವಾಸಿಯ ಜತೆ ವಾಸಿಸುತ್ತಿದ್ದಾಳೆ. ಸೌಟಿನಿಂದ ಮಗುವಿಗೆ ಬರೆ ಹಾಕಿದ ಆರೋಪಿ ಮಹಿಳೆ ತನ್ನ ತಾಯಿ ಮನೆ ಸುಳ್ಯದ ನಾವೂರಿನಲ್ಲಿ ಮಗುವಿನೊಂದಿಗೆ ವಾಸವಾಗಿದ್ದಾಳೆ.

ಮಗುವನ್ನು ಸಿಡಿಪಿಒ ನೇತೃತ್ವದಲ್ಲಿ ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಧಿಕಾರಿಗಳ ತಂಡ ಮನೆಗೆ ತೆರಳಿದಾಗ ಅವರ ಜೊತೆಗೂ ಆರೋಪಿ ಮಹಿಳೆ ದರ್ಪ ತೋರಿದ್ದಾಳೆ ಎಂದು ಆರೋಪಿಸಲಾಗಿದೆ.  ಈ ಬಗ್ಗೆ ಸುಳ್ಯ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ

Exit mobile version