10:01 AM Wednesday 10 - December 2025

ಕಲ್ಲು ಅಂದುಕೊಂಡು ಮೊಸಳೆ ಮೇಲೆ ಏರಿದ ಕೋಳಿ | ವಿಡಿಯೋ ನೋಡಿ ಬಿದ್ದು ಬಿದ್ದು ನಕ್ಕ ನೆಟ್ಟಿಗರು

crocodilia
02/04/2021

ಕಲ್ಲು ಅಂದುಕೊಂಡು ಕೋಳಿಯೊಂದು ಮೊಸಳೆಯ ಮೇಲೆ ಹತ್ತಿದೆ. ಬಾಲದಿಂದ ಮೊಸಳೆಯ ಮುಖದವರೆಗೆ ಬರುವವರೆಗೂ ಕೋಳಿ ಇದೊಂದು ಕಲ್ಲು ಅಂದುಕೊಂಡಿದೆ, ಈ ವಿಡಿಯೋ ಟ್ವಿಟ್ಟರ್ ನಲ್ಲಿ ಸದ್ಯ ವೈರಲ್ ಆಗಿದ್ದು, ಕೋಳಿಯ ಪೆದ್ದುತನ ಇಷ್ಟವಾಗಿ ನೆಟ್ಟಿಗರು ಈ ವಿಡಿಯೋವನ್ನು ಸಿಕ್ಕಾಪಟ್ಟೆ ಶೇರ್ ಮಾಡಿದ್ದಾರೆ.

ಮೊಸಳೆಯೊಂದು  ತನ್ನ ಪಾಡಿಗೆ ತಾನು ವಿಶ್ರಾಂತಿ ಪಡೆಯುತ್ತಿತ್ತು. ಇತ್ತ ಕೋಳಿ(ಹುಂಜ) ಕೂಡ ತನ್ನ ಪಾಡಿಗೆ ತಾನು ಬಂದಿದ್ದು, ನದಿಯ ಬಳಿಯಲ್ಲಿ ಮಲಗಿದ್ದ ಮೊಸಳೆಯನ್ನು ಕಂಡು ಕಲ್ಲು ಅಂದುಕೊಂಡು ಮೊಸಳೆ ಮೇಲೆ ಏರಿದೆ.

ಕಲ್ಲಿನ ಮೇಲೆ ಅಂದುಕೊಂಡು ಆರಾಮವಾಗಿ ನಡೆದುಕೊಂಡು ಮೊಸಳೆಯ ಮುಖದ ಮೇಲೆ ಬಂದಾಗ ಇದು ಕಲ್ಲು ಅಲ್ಲ ಎಂದು ಕೋಳಿಗೆ ಗೊತ್ತಾಗಿದೆ. ಅತ್ತ ನಿಲ್ಲಲೂ ಅಲ್ಲ, ಇತ್ತ ನೆಲಕ್ಕೆ ಹಾರಲೂ ಧೈರ್ಯವಿಲ್ಲ. ಸ್ವಲ್ಪ ಹೊತ್ತು ಗೊಂದಲಕ್ಕೀಡಾದ ಕೋಳಿ ನೆಲಕ್ಕೆ ಹಾರಿದೆ.

ಕೋಳಿ ನೆಲಕ್ಕೆ ಹಾರುತ್ತಿದ್ದಂತೆಯೇ ಕಾದು ಕುಳಿತಿದ್ದ ಮೊಸಳೆ ಬಾಯಿ ತೆರೆದು ಕೋಳಿಯನ್ನು ನುಂಗಲು ಯತ್ನಿಸಿದೆ ಆದರೆ, ಸ್ವಲ್ಪದರಲ್ಲೇ ಕೋಳಿ ಪಾರಾಗಿದ್ದು, ಸ್ಥಳದಿಂದ ಓಟಕ್ಕಿತ್ತಿದೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಈ ವಿಡಿಯೋಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version