12:54 AM Thursday 11 - December 2025

ಕಾಲು ಕಳೆದುಕೊಂಡ ತಾಯಿಯನ್ನು ದೇವಸ್ಥಾನದ ಮುಂದೆ ಬಿಟ್ಟು ಹೋದ ಪಾಪಿ ಮಕ್ಕಳು!

17/02/2021

ಕೊಪ್ಪಳ: ಹಣೆಯ ಮೇಲೆ ಇಷ್ಟುದ್ದ ನಾಮ ಹಾಕಿಕೊಂಡು ಫೋಟೋಗೆ ಪೋಸು ನೀಡಿರುವುದು ನೋಡಿದರೆ, ಇವರ್ಯಾರೋ ಮಹಾನ್ ಸಾಧಕರು ಅಂತ ಅಂದುಕೊಳ್ಳಬೇಕು ಆದರೆ, ಹೆತ್ತ ತಾಯಿಯನ್ನು ನೋಡಿಕೊಳ್ಳುವು ಯೋಗ್ಯತೆ ಇಲ್ಲದೇ ದೇವಸ್ಥಾನದಲ್ಲಿ ಬಿಟ್ಟು ಪರಾರಿಯಾದ ನೀಚರು ಇವರು.

ಕೊಪ್ಪಳ ಜಿಲ್ಲೆಯ ಬಂಡಿ ದುರ್ಗಾದೇವಿ ದೇವಸ್ಥಾನದಲ್ಲಿ ತಮ್ಮ ಅನಾರೋಗ್ಯ ಪೀಡಿತ ತಾಯಿಯನ್ನು ಬಿಟ್ಟು ಹೋದ ಈ ಮಕ್ಕಳು ಆ ಬಳಿಕ ತಾಯಿ ಏನಾಗಿದ್ದಾಳೆ ಎನ್ನುವುದನ್ನೂ ತಿರುಗಿಯೂ ನೋಡಿಲ್ಲ.

ಕೊಪ್ಪಳ ಜಿಲ್ಲೆಯ ದ್ರಾಕ್ಷಾಯಣಮ್ಮ ಎಂಬವರ ಮೂಕರೋದನೆಯ ಕಥೆ ಇದು. ಗ್ಯಾಂಗ್ರಿನ್ ನಿಂದ ಕಾಲು ಕಳೆದುಕೊಂಡಿದ್ದ ದ್ರಾಕ್ಷಾಯಣಮ್ಮ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಷ್ಟಾದರೂ ಒಂದು ದಿನವೂ ಇವರ ಇಬ್ಬರು ಗಂಡು ಮಕ್ಕಳು ಆಸ್ಪತ್ರೆಯ ಕಡೆಗೆ ತಲೆ ಹಾಕಿಯೂ ನೋಡಿರಲಿಲ್ಲ. ಕನಿಷ್ಠ ಮನೆಗೆ ಕರೆದೊಯ್ಯಲು ಕೂಡ ಮಕ್ಕಳು ಬರಲಿಲ್ಲ. ಹೀಗಿರುವಾಗ ಕೊನೆಗೆ ವೈದ್ಯರೇ ದ್ರಾಕ್ಷಾಯಣಮ್ಮಅವರನ್ನು ಮನೆಗೆ ಬಿಟ್ಟು ಬಂದಿದ್ದಾರೆ.

ಆಸ್ಪತ್ರೆಗೆ ಹೋದ ತಾಯಿ ಮತ್ತೆ ಬರಲು ಸಾಧ್ಯವಿಲ್ಲ ಎಂದು ಕೊಂಡಿದ್ದ ದುಷ್ಟ ಮಕ್ಕಳಾದ ವೀರೇಶ್ ಮತ್ತು ಚಂದ್ರಕಾಂತ್ ತಮ್ಮ ತಾಯಿಯನ್ನು ದೇಸ್ಥಾನದಲ್ಲಿ ಬಿಟ್ಟು ಬಂದಿದ್ದು, ಕಾಲನ್ನು ಕಳೆದುಕೊಂಡು ನರಳಾಡುತ್ತಿರುವ ತಾಯಿ ಇಬ್ಬರು ಗಂಡು ಮಕ್ಕಳಿದ್ದೂ ಕೂಡ ತುತ್ತು ಅನ್ನಕ್ಕಾಗಿ  ದೇವಸ್ಥಾನದ ಬಾಗಿಲಿನಲ್ಲಿ ಅವರಿವರು ನೀಡುವ ಅನ್ನ ತಿಂದು ಬದುಕುವಂತಹ ಪರಿಸ್ಥಿತಿಯಲ್ಲಿದ್ದಾರೆ.

ಇತ್ತೀಚಿನ ಸುದ್ದಿ

Exit mobile version