2:43 AM Thursday 29 - January 2026

ಫೆ.14ರಂದು ಕರ್ನಾಟಕದ ಜನತೆಗೆ “ಹಲೋ” ಹೇಳಲಿರುವ ಚಿರು ಪುತ್ರ

12/02/2021

ಬೆಂಗಳೂರು: ಸ್ಯಾಂಡಲ್ ವುಡ್ ನಟ ಚಿರಂಜೀವಿ ಸರ್ಜಾ ಹಾಗೂ ನಟಿ ಮೇಘನಾ ರಾಜ್ ದಂಪತಿಯ ಪುತ್ರ ಜೂನಿಯರ್ ಚಿರು, ಫೆ.14ರಂದು ಚಿರು ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಲಿದ್ದಾನೆ ಎಂದು ಮೇಘನಾ ರಾಜ್  ಹೇಳಿದ್ದಾರೆ.

ತಮ್ಮ ಮದುವೆಯ ಚಿತ್ರಗಳನ್ನು ವಿಡಿಯೋ ಮಾಡಿ ಬಿಡುಗಡೆ ಮಾಡಿರುವ ಮೇಘನಾ ಫೆ.14ರಂದು ಜ್ಯೂನಿಯರ್ ಚಿರು ನಿಮಗೆ ಹಲೋ ಎಂದು ಹೇಳಲಿದ್ದಾನೆ ಎಂದು ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ಪೋಸ್ಟ್ ಮಾಡಿದ್ದ ಮೇಘನಾ ಕೆಲವೇ ದಿನಗಳಲ್ಲಿ ರೋಮಾಂಚನಕಾರಿ ಸುದ್ದಿಯೊಂದನ್ನು ತಿಳಿಸುವುದಾಗಿ ಹೇಳಿದ್ದರು.  ಇದೀಗ ಫೆ.14ರಂದು ಜೂನಿಯರ್ ಚಿರು ನಿಮಗೆಲ್ಲರಿಗೂ ಹಲೋ ಹೇಳಲಿದ್ದಾನೆ ಎಂದು ಅವರು ಹೇಳಿದ್ದಾರೆ.

ಚಿರು ನಿಧನದ ಬಳಿಕ ಜೂನಿಯರ್ ಚಿರು ಮೇಲೆ ಇಡೀ ಕರ್ನಾಟಕವೇ ಪ್ರೀತಿ ಇರಿಸಿದೆ. ಹೀಗಾಗಿ ಚಿರು ಕುಟುಂಬದ ಪ್ರತಿ ಖುಷಿಯಲ್ಲಿ ತಾವು ಕೂಡ ಖುಷಿಪಡುತ್ತಿದ್ದಾರೆ. ಫೆ.14ರಂದು ಚಿರು ಪುತ್ರನನ್ನು ನೋಡಲು ಕರ್ನಾಟಕ ಕಾಯುತ್ತಿದೆ.

ಇತ್ತೀಚಿನ ಸುದ್ದಿ

Exit mobile version