1:20 AM Saturday 1 - November 2025

ಕರುವಿಗೆ ಮಚ್ಚಿನೇಟು: ವಿಲವಿಲ ಒದ್ದಾಡುತ್ತಿದ್ದ ಕರುವನ್ನು ರಕ್ಷಿಸಿದ ಯುವಕ ಇಮ್ರಾನ್

chikkamagaluru
07/01/2023

ಚಿಕ್ಕಮಗಳೂರು: ರಸ್ತೆ ಬದಿ ನಿಂತಿದ್ದ ಕರುವಿಗೆ ಪಾಪಿಗಳು ಮಚ್ಚಿನಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದು, ಮಚ್ಚಿನೇಟಿಗೆ ಕರು ವಿಲವಿಲ ಒದ್ದಾಡುತ್ತಾ, ರಸ್ತೆ ಬದಿ ಬಿದ್ದಿದ್ದು, ಈ ವೇಳೆ ಯುವಕನೋರ್ವ ಕರುವನ್ನು ರಕ್ಷಿಸಿದ್ದಾರೆ.

ಕರುವಿನ ಹಿಂಬದಿಗೆ ಮಚ್ಚಿನೇಟು ಬಿದ್ದ ಪರಿಣಾಮ ಆಳವಾದ ಗಾಯವಾಗಿದ್ದು, ಹಿಂಬದಿ ಭಾಗ ಬಿರುಕು ಬಿಟ್ಟಿದೆ. ರಸ್ತೆ ಮಧ್ಯೆ ರಕ್ತ ಸ್ರಾವದಿಂದ ಒದ್ದಾಡುತ್ತಿದ್ದ ಕರುವನ್ನು ಕಂಡ ಇಮ್ರಾನ್ ಎಂಬವರು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ.

ಯಾರು ಮಚ್ಚಿನಿಂದ ಹೊಡೆದಿದ್ದಾರೆ ಅನ್ನೋದು ಇನ್ನೂ ತಿಳಿದು ಬಂದಿಲ್ಲ. ಮೂಕ ಪ್ರಾಣಿಗಳ ಮೇಲೆ ಈ ರೀತಿಯ ದೌರ್ಜನ್ಯ ನಡೆಸುವವರ ವಿರುದ್ಧ ಪೊಲೀಸರು ತಕ್ಷಣವೇ ಕಾನೂನು ಕ್ರಮಕೈಗೊಳ್ಳಬೇಕು ಅನ್ನೋ ಆಕ್ರೋಶದ ಮಾತುಗಳು ಕೇಳಿ ಬಂದಿವೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version